ಬತ್ತ-ಹತ್ತಿ-ದ್ವಿದಳ ಧಾನ್ಯಗಳ ಬೆಂಬಲ ಬೆಲೆ ಏರಿಕೆ

0
452

 
ನವದೆಹಲಿ ಪ್ರತಿನಿಧಿ ವರದಿ
ಬತ್ತದ ಮೇಲಿನ ಕನಿಷ್ಛ ಬೆಂಬಲ ಬೆಲೆಯಲ್ಲಿ ಏರಿಕೆಯಾಗಿದೆ. ಬತ್ತದ ಮೇಲಿನ ಬೆಂಬಲ ಬೆಲೆಯಲ್ಲಿ 60ರೂ. ಗೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ, ಪ್ರತೀ ಕ್ವಿಂಟಾಲ್ ಬತ್ತದ ಬೆಲೆಯನ್ನು 1, 470ಕ್ಕೇರಿಕೆ ಮಾಡಲಾಗಿದೆ.
 
 
2016-17ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಪರಿಷ್ಕರಿಸಿದ್ದು, ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ಬಳಿಕ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕೃಷಿ ವೆಚ್ಚ ಹಾಗೂ ದರ ನಿಗದಿ ಆಯೋಗದ (ಸಿಎಸಿಪಿ) ಸಲಹೆಯನ್ನು ಸ್ವೀಕರಿಸಿರುವ ಕೇಂದ್ರ ಸರ್ಕಾರ ವಿವಿಧ ಬೆಳೆ, ಕಾಳು, ಧಾನ್ಯಗಳ ಮೇಲಿನ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.
 
 
2014-15 ಸಾಲಿನಲ್ಲಿ ಎ ದರ್ಜೆಯ ಬತ್ತದ ಕನಿಷ್ಠ ಬೆಂಬಲ ಬೆಲೆಯನ್ನು ರೂ.1,410ರಿಂದ ರೂ. 1,450ಕ್ಕೆ ಏರಿಸಲಾಗಿತ್ತು. ಇದೀಗ ಈ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, 2015-16 ರ ಹಂಗಾಮಿಗೆ ಸಾಧಾರಣ ಬತ್ತಕ್ಕೆ ಕ್ವಿಂಟಾಲಿಗೆ 1410 ರುಪಾಯಿ, ಉತ್ತಮ ಗುಣಮಟ್ಟದ ಬತ್ತಕ್ಕೆ 1510 ರುಪಾಯಿಗಳು ದೊರೆಯಲಿದೆ.
 
 
ಇದೇ ವೇಳೆ ಸರ್ಕಾರ ದ್ವಿದಳ ಧಾನ್ಯಗಳ ಬೆಂಬಲ ಬೆಲಯನ್ನೂ ಏರಿಕೆ ಮಾಡಿದ್ದು, ದ್ವಿದಳ ಧಾನ್ಯಗಳ ಬೆಂಬಲ ಬೆಲೆಯಲ್ಲಿ 400ರೂ.ಗೆ ಏರಿಕೆ ಮಾಡಲಾಗಿದೆ. ಹತ್ತಿಯ ಮೇಲಿನ ಬೆಂಬಲ ಬೆಲೆಯನ್ನೂ ಸಿಸಿಇಎ 60 ರೂ. ಗಳ ಬೆಂಬಲ ಬೆಲೆ ಏರಿಕೆ ಮಾಡಿದ್ದು, ಮಧ್ಯಮ ದರ್ಜೆಯ ಹತ್ತಿ ಬೆಲೆ 3,860ಕ್ಕೆ ಏರಿಕೆಯಾಗಿದ್ದು, ಧೀರ್ಘ ಪ್ರಧಾನ ದರ್ಜೆಯ ಹತ್ತಿಗೆ 4,160 ರು. ದರ ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here