ಬಡವ್ಯಾಪಾರಿ ʻಶೇಟ್‌ʼ ಆದ ಕಥೆ!

0
868

ನಿತ್ಯ ಅಂಕಣ-೭

ಜೀವನದಲ್ಲಿ ಕಷ್ಟ ಪಟ್ಟರೆ ಸುಖ ಪಡೆಯಬಹುದು’ ಎಂಬುವುದು ಜ್ಞಾನಿಗಳ ಮಾತು. ಈ ಮಾತು ಸರ್ವಕಾಲಿಕ ಸತ್ಯವೂ ಹೌದು..! ಕೆಲವೊಮ್ಮೆ ಕಷ್ಟಪಟ್ಟರೂ ಸುಖ ಅನುಭವಿಸಲು ಅಸಾಧ್ಯ ಆಗದಿರುವುದು ಇದೆ. ಅದಕೆಲ್ಲವೂ ಕಾರಣ..ಇಷ್ಟೇ..! ಶ್ರಮಿಕನ ಶ್ರಮವು ಪ್ರಮಾಣಿಕ ಇಲ್ಲದೆ, ಅಪ್ರಮಾಣಿಕ ಆಗಿರುವುದು. ವ್ಯವಾಹರದಲ್ಲಿ ಮೋಸ ವಂಚನೆ, ಅತಿಯಾಶೆ ಅಹಂಭಾವ ಮೊದಲಾದ ದುರ್ಗಣಗಳ ವ್ಯವಹಾರಗಳು ಯಾವತ್ತೂ ಧರ್ಮವು ಒಪ್ಪುದಿಲ್ಲ.

ಅಕಸ್ಮಾತ್ ಅಧರ್ಮದ ದಾರಿಯಲ್ಲಿ ನಡೆದು, ವ್ಯವಹಾರದಲ್ಲಿ ಯಶಸ್ಸು ಪಡೆದರೂ ಅದರ ಸುಖವು ಕ್ಷಣಿಕ ಮಾತ್ರ..! ವಂಚಿಸಿ ಕೂಡಿಟ್ಟ ಹಣವು ಶಾಶ್ವತವು ಅಲ್ಲ. ಕಷ್ಟ ನಷ್ಟಗಳು ಬರುವುದಂತು ಖಂಡಿತ. ಪ್ರಾಮಾಣಿಕ ಕಡು ಬಡ ತರಕಾರಿ ವ್ಯಾಪಾರಿಯೊಬ್ಬರು ಸದ್ಗುರು ನಿತ್ಯಾನಂದರ ಅನುಗ್ರಹ ಪಡೆದು ಶ್ರೀಮಂತನಾದ ಒಂದು ಕಥೆಯು ನಾಗರಿಕ ಸಮಾಜಕೊಂದು ನೀತಿ ಪಾಠ ಎಂದು ಹೇಳಬಹುದು.

ಚಿತ್ರ ಕೃಪೆ: ಅಂತರ್ಜಾಲ

ಗಣೇಶಪುರಿಯಲ್ಲಿ ಒರ್ವ ಬಡ ವ್ಯಾಪಾರಿ ಇದ್ದನು. ಆತನ ಹೆಸರು ‘ಬಾಬು ಆಳ್ಸಿ’ ಎಂದು. ಬೆತ್ತದ ಬುಟ್ಟಿಯಲ್ಲಿ ಅಡಿಗೆಗೆ ಬೇಕಾದ ತರಕಾರಿಗಳನ್ನು ತುಂಬಿಸುಕೊಂಡು ಊರಿನ ಪ್ರತಿ ಮನೆಗಳಿಗೂ ಹೋಗಿ ಮಾರಟಮಾಡುತ್ತಿದ್ದನು. ಆ ದಿನದ ಗಳಿಕೆಯಲ್ಲಿ ಆತನ ಜೀವನ ಸಾಗುತಿತ್ತು. ವ್ಯಾಪಾರದಲ್ಲಿ ಎಳ್ಳಷ್ಟು ಜನರಿಗೆ ಮೋಸ ಎಸಗದೆ ಪ್ರಾಮಾಣಿಕವಾಗಿ ವ್ಯವಹರಿಸುತ್ತಿದ್ದನು. ಹಾಳಾದ ತರಕಾರಿಗಳು ಇದ್ದರೆ ಗಿರಾಕಿಗಳಿಗೆ ನೀಡದೆ, ಅವುಗಳನ್ನು ದನಗಳಿಗೆ ನೀಡುತ್ತಿದ್ದನು. ಎಂದೂ ಅಧಿಕ ಲಾಭವನ್ನು ಪಡೆಯುತ್ತಿರಲಿಲ್ಲ. ಬಡ ಬಗ್ಗರು ಕಂಡರೆ ಅವರಿಗೆ ಮತ್ತಷ್ಟು ಕಡಿಮೆ ದರಕ್ಕೆ ತರಕಾರಿಗಳನ್ನು ನೀಡುತ್ತಿದ್ದನು.

ಕುಟುಂಬದ ಜವಬ್ದಾರಿ ಹೆಚ್ಚಿದರಿಂದ ತರಕಾರಿ ವ್ಯಾಪಾರದಿಂದ ಸಂಸಾರ ಸಾಗಿಸುವುದು, ಬಾಬು ಆಳ್ಸೆಗೆ ಕಷ್ಟಕರವಾಯಿತು. ಹಾಗಾಗಿ ಅವನು ಬೇರೆ ಉದ್ಯೋಗ ಪ್ರಾರಂಭಿಸುವುದು. ಅದಕ್ಕಾಗಿ ತಾನಿರುವ ಗಣೇಶಪುರಿ ಊರನ್ನು ಬಿಟ್ಟು ಬೇರೆ ಊರಿಗೆ ವಲಸೆ ಹೋಗಲು ಮನದೊಳಗೆ ನಿರ್ದರಿಸಿದ. ಯಾವೂದಕ್ಕೂ ಮೊದಲು, ತಾನು ಆರಾಧಿಸುವ ಗುರುಗಳಲ್ಲಿ ಒಂದು ಮಾತು ಕೇಳಬೇಕೆಂದು ನಿತ್ಯಾನಂದರ ಬಳಿ ಹೋದನು. ನಮಸ್ಕರಿಸಿ.. ವಿಷಯ ಹೇಳುವ ಮೊದಲೇ… ನಿತ್ಯಾನಂದರು, ನೀನು ಕೇಳಲು ಬಂದಿರುವ ವಿಷಯ ನನಗೆ ತಿಳಿದಾಗಿದೆ. ಮತ್ತೆ ನೀನು ಹೇಳುವುದು ಬೇಡ. ಗಣೇಶಪುರಿ ಬಿಟ್ಟು ನೀನು “ಎಲ್ಲಿಗೂ ಹೋಗುವುದು ಬೇಡ, ಎಲ್ಲವೂ ಸರಿಯಾಗುತ್ತದೆ” ಎಂದು ಒಂದೇ ಮಾತಲ್ಲಿ ಹೇಳಿ ಧೈರ್ಯವನ್ನು ತುಂಬಿದರು. ನಂತರ ನಡೆದ ಬೆಳವಣಿಗೆಯಲ್ಲಿ ಅದೇ ಊರಿನ ದಾದಾ ಗಾಂಧಿ ಎಂಬುವವರು ಬಾಬು ಆಳ್ಸಿಗೆ ತಮ್ಮದೆ ಹೊಲದ ಆಯಾಕಟ್ಟಿನ ಸ್ಥಳದಲ್ಲಿ ಚಪ್ಪರ ಕಟ್ಟಿಸಿದರು. ಬಾಬು ಆಳ್ಸಿಗೆ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಸಹಕರಿಸಿದರು. ಅಲ್ಲಿ ಬಾಬು ಆಳ್ಸಿ ಅವರ ವ್ಯಾಪಾರವನ್ನು ಮಾಡಲಾರಂಬಿಸಿದರು. ವ್ಯಾಪಾರವು ಬೆಳೆಯುತ್ತ ಲಾಭ ದಡೆಗೆ ಸಾಗಿತು. ನಂತರ ಬಾಬಾ ಆಳ್ಸಿ ಅವರು ಸ್ವಂತದಾದ ಕಿರಾಣಿ ಅಂಗಡಿಯನ್ನು ತೆರೆದರು. ಮುಂದೆ ಅವರೂ ಅನೂಲಕಸ್ಥರಾದರು. ಬಾಬು ಆಳ್ಸಿ ಎಂದು ಕರೆಯಲ್ಪಡುತ್ತಿದ್ದ ಅವರು ಗುರುದೇವರ ಅನುಗ್ರಹದಿಂದ ‘ಬಾಬುಶೇಟ್ ಆಳ್ಸಿ’ ಎಂದು ಸಾರ್ವಜನಿಕ ವಲಯದಲ್ಲಿ ಕರೆಯಲ್ಪಟ್ಟು ಜನಪ್ರಿಯರಾದರು.

Advertisement

ತಾರಾನಾಥ್‌ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here