ಬಡವರ ಮೇಲೆ ಪ್ರಯೋಗಿಸಿದ ಬ್ರಹ್ಮಾಸ್ತ್ರ:ರಾಹುಲ್

0
267

ನವದೆಹಲಿ ಪ್ರತಿನಿಧಿ ವರದಿ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ನೋಟ್ ಬದಲಾವಣೆಗಾಗಿ ರಾಹುಲ್ ಗಾಂಧಿ ಬ್ಯಾಂಕ್ ನಲ್ಲಿ ಕ್ಯೂ ನಿಂತುಕೊಂಡಿದ್ದರು.
ರಾಹುಲ್ ಗಾಂಧಿ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿರುವ ಎಸ್ ಬಿಐ ಎಟಿಎಂಗೆ ಆಗಮಿಸಿದ್ದರು. 4000ರೂ.ಎಕ್ಸ್ ಚೇಂಜ್ ಮಾಡಲು ರಾಹುಲ್ ಬಂದಿದ್ದರು.
 
 
 
500ರೂ. ಮತ್ತು 1000ರೂ, ನೋಟುಗಳ ರದ್ದು ಹಿನ್ನೆಲೆಯಲ್ಲಿ ಮಾತನಾಡಿದ ರಾಹುಲ್, ಕೇಂದ್ರದ ನಿರ್ಧಾರದಿಂದ ಜನರಿಗೆ ಕಷ್ಟವಾಗುತ್ತಿದೆ. ಬಡವರ ನೋವು ಪ್ರಧಾನಿಗೆ ಅರ್ಥವಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
 
 
 
ಶ್ರೀಸಾಮಾನ್ಯ ಕಷ್ಟದಲ್ಲಿದ್ದಾನೆ, ಅದಕ್ಕಾಗಿ ನಾನೂ ಬಂದಿದ್ದೇನೆ. ಬ್ಯಾಂಕ್ ಕ್ಯೂನಲ್ಲಿ ಯಾರಾದರೂ ಕೋಟ್ಯಾಧೀಶರು ಇದ್ದರಾ? ಸೂಟ್ ಧರಿಸಿದವರು ಯಾರಾದರೂ ಕ್ಯೂನಲ್ಲಿದ್ದಾರಾ? ಹಾಗಾದರೆ ಸರ್ಕಾರ ಯಾರಿಗಘಾಇ ಹೊಸ ಕಾನೂನು ತರುತ್ತಿದೆ? ಕೇಂದ್ರ ಸರ್ಕಾರ 15-20 ಜನರಿಗಾಗಿ ಕೆಲಸ ಮಾಡುತ್ತಿದ್ಯಾ?, ಬ್ಯಾಂಕ್ ನಲ್ಲಿ ಕ್ಯೂ ನಿಲ್ಲಲು ಜನಸಾಮಾನ್ಯರು ಪಾರದಾಡುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಏನು ಉತ್ತರ ನೀಡುತ್ತಾರೆ ಎಂದು ಎಐಸಿಸಿ ಉಪಾಧ‍್ಯಕ್ಷ ರಾಹುಲ್ ಗಾಂಧಿ, ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here