ಬಜಕೂಡ್ಲು ಗೋಶಾಲೆಯಲ್ಲಿ ಗೌರೀ ಪೂಜೆ

0
318

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಬಜಕೂಡ್ಲು ಶ್ರೀ ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಆದಿತ್ಯವಾರ ಸಂಜೆ ಗೌರೀಪೂಜೆ ನಡೆಯಿತು. ಗೋಕರ್ಣಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರಿಯ ಹವ್ಯಕ ಮಂಡಲದ ಮಹಿಳಾ ವಿಭಾಗದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಲ್ಕ ವಸಂತಕುಮಾರ್ ದಂಪತಿಗಳು ಪೂಜೆಯಲ್ಲಿ ಕತೃಗಳಾಗಿ ಭಾಗಿಯಾದರು.
 
 
 
ಧರ್ಮ ಕರ್ಮ ವಿಭಾಗದ ಸಹ ಕಾರ್ಯದರ್ಶಿ ವೇದಮೂರ್ತಿ ಕೇಶವಪ್ರಸಾದ ಕೂಟೇಲು ಧಾರ್ಮಿಕ ವಿಧಿಗಳಿಗೆ ನೇತೃತ್ವವನ್ನು ನೀಡಿದರು. ಈ ಸಂದರ್ಭದಲ್ಲಿ ಗೋಪೂಜೆ, ಕುಂಕುಮಾರ್ಚನೆ, ಭಜನೆ, ಆದಿತ್ಯ ಹೃದಯ ಪಾರಾಯಣ ನಡೆಯಿತು. ಮಾತೃ ವಿಭಾಗದ ಅಧ್ಯಕ್ಷೆ ಕುಸುಮಾ ಪೆರ್ಮುಖ, ಮುಷ್ಟಿ ಭಿಕ್ಷೆಯ ಗೀತಾಲಕ್ಷ್ಮೀ ಮುಳ್ಳೇರಿಯ, ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಗೋಶಾಲೆಯ ಅಧ್ಯಕ್ಷ ಜಗದೀಶ ಗೋಳಿತ್ತಡ್ಕ, ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ, ಎಣ್ಮಕಜೆ ವಲಯ ಕಾಮದುಘಾ ಪ್ರಧಾನ ಗಣರಾಜ ಕಡಪ್ಪು, ಮಾತೃ ವಿಭಾಗದ ವಸಂತಿ ಅಬ್ಬಿಕಟ್ಟ, ವಿನಯ ಕೃಷ್ಣ ಕಾನದಮೂಲೆ, ಸತ್ಯಪ್ರಕಾಶ ಬಾಳೆಮೂಲೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here