ಬಂದೂಕು ಸರಬರಾಜು ಮಾಡಿದ್ದ ವ್ಯಕ್ತಿ ಬಂಧನ

0
304

ಬೆಳಗಾವಿ ಪ್ರತಿನಿಧಿ ವರದಿ
ಬೆಳಗಾವಿಯಲ್ಲಿ 6 ಜನ ಶಾರ್ಪ್ ಶೂಟರ್ಸ್ ಬಂಧನ ಪ್ರಕರಣದಲ್ಲಿ ಎಪಿಎಂಸಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಯಲ್ಲಿ ಆರೋಪಿಗಳಿಗೆ ಬಂದೂಕು ಸರಬರಾಜು ಮಾಡಿದ್ದ ವ್ಯಕ್ತಿಯ ಬಂಧನವಾಗಿದೆ.
 
 
 
 
ಮಧ್ಯಪ್ರದೇಶದ ಚಾಚಾರಿಯಾ ಗ್ರಾಮದ ಚರಣ ಸಿಂಗ್ ನನ್ನು ಬಂಧಿಸಲಾಗಿದೆ. ಹಿಂಡಲಗಾ ಜೈಲಿನಲ್ಲಿರುವ ದಿನೇಶ್ ಶೆಟ್ಟಿ ಆಪ್ತ ಮಂಗಳೂರಿನ ಗಣೇಶ ಶಟ್ಟಿ ಸಹ ಬಂಧನ ಮಾಡಲಾಗಿದೆ.
8 ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳಿಂದ ಮಹತ್ವದ ದಾಖಲೆಯನ್ನು ಕಲೆ ಹಾಕಿದ್ದಾರೆ.
 
 
 
ಆರೋಪಿಗಳು ಜೈಲಿನಲ್ಲಿರುವ ದಿನೇಶ್ ಶೆಟ್ಟಿ ಬಿಡುಗಡೆಗೊಳಿಸಲು ಸ್ಕೆಚ್ ಹಾಕಿದ್ದರು. ನಂತರ ಮಂಗಳೂರು ಮೂಲಕ ರಾಜಕಾರಣಿಯ ಹತ್ಯೆಗೆ ಸ್ಕೇಚ್ ರೂಪಿಸಿದ್ದರು. ಮಂಗಳೂರಿನ ಪ್ರಸಾದ್ ಅತ್ತಾವರ್, ಕಳನಿ ನಾಗೇಶ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದೇ ಫೆ.15ರಂದು ಮಂಗಳೂರು ಕೋರ್ಟ್ ಗೆ ಅತ್ತಾವರ್, ಕಳನಿ ಹಾಜರಾಗಿದೆ. ಈ ವೇಳೆ ಹತ್ಯೆಗೆ ಆರೋಪಿಗಳ ಹತ್ಯೆಗೆ ಸ್ಕೆಚ್ ಹಾಕಿದ್ದರು. ಮಂಗಳೂರಲ್ಲಿ ಹತ್ಯೆ ಸ್ಥಳ ಮತ್ತು ವೇಳೆ ನಿಗದಿ ಮಾಡಿದ್ದರು.

LEAVE A REPLY

Please enter your comment!
Please enter your name here