ಬಂದರು ಮತ್ತು ಒಳನಾಡು ಸಚಿವರಿಗೆ ಪ್ರಶ್ನೆ

0
205

 
ನಮ್ಮ ಪ್ರತಿನಿಧಿ ವರದಿ
ಹಾಸನ ಜಿಲ್ಲೆಯ ಸಕಲೇಶಪುರದ ಅಡ್ಡಹೊಳೆಯಿಂದ ದಕ್ಷಿಣಕನ್ನಡ ಜಿಲ್ಲೆ ಬಿ.ಸಿ ರೋಡ್ ವರೆಗೆ ಚತುಷ್ಪಥ ರಸ್ತೆಯು ಹೆದ್ದಾರಿ ಪ್ರಾಧಿಕಾರದ ಮೂಲಕ ಮಂಜೂರಾಗಿದ್ದು ಇದರ ಒಟ್ಟು ಉದ್ದವೆಷ್ಟು? ಹಾಗೂ ಅಂಕುಡೊಂಕಾಗಿರುವ ರಸ್ತೆಯನ್ನು ಸರಿಪಡಿಸಲು ಯಾವ ರೀತಿಯ ಯೋಜನೆಯನ್ನು ರೂಪಿಸಿಕೊಂಡಿದೆ? ಯೋಜನೆ ರೂಪಿಸಿಕೊಂಡಿದ್ದರೆ ಯಾವಾಗ ಪ್ರಾರಂಭವಾಗುವುದು ಮತ್ತು ಯಾವ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ ಹಾಗೂ ಯಾವ ಕಾಲಮಿತಿಯೊಳಗೆ ಮುಕ್ತಾಯಗೊಳಿಸಲಾಗುವುದು? ಎಂದು ವಿಧಾನ ಪರಿಷತ್ತಿನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಚುಕ್ಕೆ ಗುರುತಿನ ಪ್ರಶ್ನೆಯಡಿ ಮಾನ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪನವರಿಗೆ ಕೇಳಿದರು.
 
 
ಇದಕ್ಕೆ ಉತ್ತರಿಸಿದ ಸಚಿವರು ಹಾಸನ ಜಿಲ್ಲೆಯ ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಬಿ.ಸಿ ರೋಡ್ನವರೆಗೆ ಚತುಷ್ಪಥ ರಸ್ತೆಯು ಭಾರತೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಮಂಜೂರಾಗಿದ್ದು ಸದರಿ ರಸ್ತೆಯ ಒಟ್ಟು ಉದ್ದ 63.52 ಕಿ.ಮೀ ಇದ್ದು ಈ ಕಾಮಗಾರಿಯ ವಿಸ್ತ್ರತ ಯೋಜನಾ ವರದಿಯಾನುಸಾರ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವುದಲ್ಲದೆ ಸದರಿ ರಸ್ತೆಯಲ್ಲಿ ಬರುವ ತಿರುವುಗಳನ್ನು ಪುನರ್ ಪಂಕ್ತೀಕರಣ ಮತ್ತು ಮಧ್ಯರೇಖೆಯನ್ನು ಬದಲಾಯಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಈ ಯೋಜನಾ ಕಾಮಗಾರಿಯನ್ನು ಲಾರ್ಸನ್ & ಟುಬ್ರೋ (ಐ & ಖಿ)ಗುತ್ತಿಗೆದಾರರಿಗೆ ನೀಡಲಾಗಿದ್ದು 2016 ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಿಸಿ ಮುಂದಿನ 30 ತಿಂಗಳ ಅವಧಿಯಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here