ಕಲಬುರಗಿ ಪ್ರತಿನಿಧಿ ವರದಿ
ದಿವಂಗತ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಪತ್ನಿ ವಿಧಿವಶರಾಗಿದ್ದಾರೆ. ಇಂದು ಮುಂಜಾನೆ 5 ಗಂಟೆಗೆ ಬಂಡೆ ಪತ್ನಿ ಮಲ್ಲಮ್ಮ ಬಂಡೆ ನಿಧನರಾಗಿದ್ದಾರೆ.
ಬಂಡೆ ಪತ್ನಿ ಹಲವು ದಿನಗಳಿಂದ ಮೆದುಳು ಕ್ಯಾನ್ಸರ್ ನಿಂದ ಬಳಲುತ್ತುದ್ದು, ಕಲಬುರ್ಗಿಯ ಸೂರ್ಯನಗರದ ಸಹೋದರಿ ಮನೆಯಲ್ಲಿ ಸಾವನ್ನಪ್ಪಿದ್ದಾರೆ.
ಬಂಡೆ ಸಹೋದರ ಆಕ್ರೋಶ:
ರಾಜ್ಯದ ಸರ್ಕಾದ ವಿರುದ್ಧ ದಿವಂಗತ ಮಲ್ಲಿಕಾರ್ಜುನ ಬಂಡೆ ಸಹೋದರ ಪ್ರಭು ಬಂಡೆ ಆಕ್ರೋಶಗೊಂಡಿದ್ದಾರೆ. ಬಂಡೆ ಪತ್ನಿಗೆ ಪೂರ್ಣ ವೇತನ ನೀಡದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಂಡೆ ನಿಧನರಾದ ಸಂದರ್ಭದಲ್ಲಿ ಸರ್ಕಾರ ಬಂಡೆ ಪತ್ನಿಗೆ ಪೂರ್ಣ ವೇತನ ನೀಡುವುದಾಗಿ ಭರವಸೆ ನೀಡಿತ್ತು. ಅನೇಕ ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಸರ್ಕಾರದ ಧೋರಣೆಯಿಂದ ಮಲ್ಲಮ್ಮ ಅವರು ತೀವ್ರ ನೊಂದಿದ್ದರು ಎಂದು ಬಂಡೆ ಸಹೋದರ ಆಕ್ರೋಶಗೊಂಡಿದ್ದಾರೆ.
ರೌಡಿ ಮುನ್ನ ಬಂಧನ ವೇಳೆ ಶೂಶೌಟ್ ನಲ್ಲಿ ಮಲ್ಲಿಕಾರ್ಜಿನ ಬಂಡೆ ಸಾವನ್ನಪ್ಪಿದ್ದರು. 2014ರ ಜ.14ರಂದು ಮಲ್ಲಿಕಾರ್ಜುನ ಸಾವನ್ನಪ್ಪಿದ್ದರು.