ಫ್ಲೈಓವರ್ ಕುಸಿತ: 24ಕ್ಕೇರಿದ ಸಾವಿನ ಸಂಖ್ಯೆ

0
293

 
ರಾಷ್ಟ್ರೀಯ ಪ್ರತಿನಿಧಿ ವರದಿ
ಕೋಲ್ಕತ್ತಾದಲ್ಲಿ ನಿರ್ಮಾಣದ ಹಂತದಲ್ಲಿರುವ ಫ್ಲೈಓವರ್ ಕುಸಿತ ಕೇಸ್ ಹಿನ್ನೆಲೆಯಲ್ಲಿ ಐಸಿಆರ್ ಸಿಎಲ್ ಕಂಪನಿ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆದಿದೆ.
 
ಹೈದರಾಬಾದ್ ನ ಬಂಜಾರಾ ಹಿಲ್ಸ್ ನ ಪಂಚವಟಿ ಕಾಲೋನಿಯಲ್ಲಿರುವ ಐಸಿಆರ್ ಸಿಎಲ್ ಕೇಂದ್ರ ಕಚೇರಿ ಮೇಲೆ ಕೋಲ್ಕತ್ತಾ ಪೊಲೀಸರು ದಾಳಿ ನಡೆಸಿದ್ದಾರೆ. 5 ಪೊಲೀಸರ ತಂಡ ದಾಳಿ ನಡೆಸಿದ್ದು, ಕಚೇರಿಯಲ್ಲಿ ತಪಾಸಣೆ ನಡೆಸಿದ್ದಾರೆ.
 
ಐಸಿಆರ್ ಸಿಎಲ್ ಕಂಪನಿ ಫ್ಲೈಓವರ್ ನಿರ್ಮಾಣ ಕೆಲಸದ ಗುತ್ತಿಗೆ ಪಡೆದಿತ್ತು. ಫ್ಲೈಓವರ್ ಕುಸಿತಕ್ಕೆ ಕಳಪೆ ಗುಣಮಟ್ಟ ಕಾರಣ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಐಸಿಆರ್ ಸಿಎಲ್ ಕಂಪನಿ ಅಧಿಕಾರಿಗಳು ಬಂಧನವಾಗುವ ಸಾಧ್ಯತೆಯಿದೆ.
 
 
ನಿನ್ನೆ ಮಧ್ಯಾಹ್ನ ಕೋಲ್ಕತ್ತಾದ ಬಾಬಾ ಬಜಾರ್ ನ ಗಣೇಶ್ ಟಾಕೀಸ್ ಬಳಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತವಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸೇನೆ, ಎನ್ ಡಿ ಆರ್ ಎಫ್ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇನ್ನೂ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆಯಿದೆ.

LEAVE A REPLY

Please enter your comment!
Please enter your name here