ಫ್ರಾನ್ಸ್ ನಲ್ಲಿ ಮಾರಣಹೋಮ

0
209

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಫ್ರಾನ್ಸ್ ನಲ್ಲಿ ರಾಷ್ಟ್ರೀಯ ದಿನದಂದೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನೀಸ್ ಪಟ್ಟದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ರೆಸಾರ್ಟ್ ನಲ್ಲಿ ಸೇರಿದ್ದ ನೂರಾರು ಜನರ ಮೇಲೆ ಟ್ರಕ್ ಹರಿಸಿ ಜನರ ಮಾರಣಹೋಮ ನಡೆಸಲಾಗಿದೆ. ಘಟನೆಯಲ್ಲಿ 80 ಮಂದಿಯನ್ನು ಹತ್ಯೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
 
 
ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಾದ ಬ್ಯಾಸ್ಟೀಲ್ ಡೇ ಅಂಗವಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಅಪರಿಚಿತ ಉಗ್ರರು ಜನರ ಮೇಲೆ ಯದ್ವಾತದ್ವಾ ಟ್ರಕ್ ನುಗ್ಗಿಸಿದ್ದಾರೆ.
 
ಸಿಡಿಮದ್ದು ಪ್ರದರ್ಶನ ವೀಕ್ಷಿಸುತ್ತಿದ್ದಾಗ ದಾಳಿ ನಡೆಸಿದ ಭಯೋತ್ಪಾದಕರು ತನ್ನ ಕೃತ್ಯಕ್ಕೆ ಸ್ಫೋಟಕ ತುಂಬಿದ  ಟ್ರಕ್ ಬಳಸಿಕೊಂಡಿದ್ದು, 2 ಕಿ.ಮೀಟರ್​ಗೂ ದೂರ ಮನಬಂದಂತೆ ನುಗ್ಗಿಸಿ ದಾಳಿ ನಡೆಸಿದ್ದಾನೆ. ಟ್ರಕ್​ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಗ್ರೆನೇಡ್​ಗಳನ್ನು ಇರಿಸಿಕೊಂಡಿದ್ದ ಎನ್ನಲಾಗಿದೆ. ಇದೇ ವೇಳೆ ತನ್ನ ಕೈನಲ್ಲಿದ್ದ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾರೆ.
 
 
ಇದರಿಂದ ಅಲರ್ಟ್ ಆದ ಫ್ರಾನ್ಸ್ ಭದ್ರತಾ ಪಡೆ ಟ್ರಕ್ ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ದಾಳಿಕೋರರ ಪೈಕಿ ಕೆಲವರು ಪರಾರಿಯಾಗಿರುವ ಶಂಕೆಯಿದೆ. ಇದು ಪೂರ್ವಯೋಜಿತ ಉಗ್ರರ ದಾಳಿ ಎಂದು ರಕ್ಷಣಾ ಪಡೆಗಳು ಖಚಿತಪಡಿಸಿವೆ. ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿದೆ.
 
ಇಂಡಿಯನ್ಸ್ ಸೇಫ್:
ಫ್ರಾನ್ಸ್ ದಾಳಿಯಲ್ಲಿ ಫ್ರಾನ್ಸ್ ನಲ್ಲಿನ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಘಟನೆ ಹಿನ್ನೆಲೆಯಲ್ಲಿ ಭಾರತೀಯ ಧೂತವಾಸದ ಸಹಾಯವಾಣಿ ಆರಂಭವಾಗಿದೆ. ಸಹಾಯವಾಣಿ ಸಂಖ್ಯೆ: 33- 1 -40507070
 
ಹೊಲಾಂಡೆ ಖಂಡನೆ
ಫ್ರಾನ್ಸ್ ನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಖಂಡಿಸಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಹೊಲಾಂಡೆ ಮೂರು ತಿಂಗಳ ಕಾಲ ತುರ್ತುಸ್ಥಿತಿ ಘೋಷಿಸಿದ್ದಾರೆ. ಇದು ಫ್ರಾನ್ಸ್ ನ ಆತ್ಮದ ಮೇಲೆ ನಡೆದಿರುವ ದಾಳಿಯಾಗಿದೆ. ನಮ್ಮ ರಾಷ್ಟ್ರೀಯ ದಿನಾಚರಣೆ ವೇಳೆ ಪೈಶಾಚಿಕ ದಾಳಿ ನಡೆದಿದೆ. ಇಸ್ಲಾಮಿಕ್ ಉಗ್ರರ ಬೆದರಿಕೆಯಲ್ಲಿ ಫ್ರಾನ್ಸ್ ಸಿಲುಕಿದೆ ಎಂದು ಹೊಲಾಂಡೆ ಹೇಳಿದ್ದಾರೆ.
 
 
ಒಬಾಮಾ ಸಂತಾಪ
ಫ್ರಾನ್ಸ್ ದೇಶದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಖಂಡಿಸಿದ್ದಾರೆ. ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here