ಫ್ರಾನ್ಸ್ ನಲ್ಲಿ ಉಗ್ರರ ದಾಳಿ: ಪ್ರಧಾನಿ, ರಾಷ್ಟ್ರಪತಿ ಖಂಡನೆ

0
490

ವರದಿ: ಲೇಖಾ
ಫ್ರಾನ್ಸ್​ನ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಲವಾಗಿ ಖಂಡಿಸಿದ್ದಾರೆ.
 
 
ಫ್ರಾನ್ಸ್ ನ ರಾಷ್ಟ್ರೀಯ ದಿನಾಚರಣೆ ಬ್ಯಾಸ್ಟೀಲ್ ಡೇ ಆಚರಣೆ ಸಂದರ್ಭದಲ್ಲಿ ನಡೆದ ಉಗ್ರರ ದಾಳಿಯಿಂದ 80ಕ್ಕೂ ಅಧಿಕ ಸಾವು ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಫ್ರೆಂಚ್ ಸಹೋದರ-ಸಹೋದರಿಯರ ಜತೆಗೆ ಭಾರತವಿದೆ ಎಂಬ ಭರವಸೆ ನೀಡಿದ್ದಾರೆ.
 
 
ಮೃತ ಕುಟುಂಬಗಳಿಗೆ ಸಾಂತ್ವಾನದ ಮಾತುಗಳನ್ನಾಡಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಘಟನೆಯ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಕ್ರಿಯಿಸಿದ್ದು, ಖಂಡನೆ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಜನತೆಯ ಬುಜಕ್ಕೆ ಬುಜ ನೀಡಿ ಭಾರತನಿಲ್ಲಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಫ್ರಾನ್ಸ್​ಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.
 
ಅಮೆರಿಕ ಅಧ್ಯಕ್ಷ ಒಬಾಮ, ಡೊನಾಲ್ಡ್ ಟ್ರಂಪ್, ಹಿಲರಿ ಕ್ಲಿಂಟನ್ ಸೇರಿದಂತೆ ವಿಶ್ವದ ನಾಯಕರು ಘಟನೆ ಖಂಡಿಸಿ, ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here