ಫ್ಯಾಕ್ಟರಿಯಲ್ಲಿ ಅಗ್ನಿ

0
312

ರಾಷ್ಟ್ರೀಯ ಪ್ರತಿನಿಧಿ ವರದಿ
ಪಟಾಕಿ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಘಟನಾ ಸ್ಥಳದಲ್ಲೇ 8 ಜನರು ಸಜೀವ ದಹನವಾದ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯಲ್ಲಿ ಸಂಭವಿಸಿದೆ.
 
 
ಅಗ್ನಿ ದುರಂತದಲ್ಲಿ ಐವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದು,  15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಪಟಾಕಿಗಳನ್ನು ಲಾರಿಗೆ ತುಂಬಿಸುತ್ತಿದ್ದಾಗ ಈ ಅವಘಡ ಸಂಭವಿಸಿದ್ದು,  ಒಂದು ಲಾರಿ ಸಂಪೂರ್ಣ ಭಸ್ಮವಾಗಿದೆ.  ಅ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.
 
ವಲರ್ಮತಿ, ಸ್ವರ್ಣಕುಮಾರಿ, ಪದ್ಮಾವತಿ, ಸುಬ್ಬುಲಕ್ಷ್ಮಿ, ದೇವಿ, ಭಾಸ್ಕರ್ , ರಾಜಾ ಸೇರಿ 8 ಜನರು ದುರ್ಮರಣ ಹೊಂದಿದ್ದಾರೆ. ಬೆಂಕಿಯ ಜ್ವಾಲೆ ಸಮೀಪದ ಸ್ಕ್ಯಾನಿಂಗ್ ಸೆಂಟರ್ ಗೂ ವ್ಯಾಪಿಸಿದ್ದು, ಸ್ಕ್ಯಾನಿಂಗ್ ಸೆಂಟರಿನಲ್ಲಿದ್ದ ಗರ್ಭಿಣಿ ಮಹಿಳೆಯರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here