'ಫ್ಯಾಂಟಮ್' ಚಿತ್ರ ನಿರ್ದೇಶಿಸಿದ್ದಕ್ಕೆ ಆಕ್ರೋಶ

0
199

 
ರಾಷ್ಟ್ರೀಯ ಪ್ರತಿನಿಧಿ ವರದಿ
‘ಭಜರಂಗೀ ಭಾಯಿಜಾನ್ ನಿರ್ದೇಶಕನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಪಾಕಿಸ್ತಾನದ ಕರಾಚಿ ಏರ್ ಪೋರ್ಟ್ ನಲ್ಲಿ ನಿರ್ದೇಶಕ ಕಬೀರ್ ಖಾನ್ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ.
 
 
ಕಬೀರ್ ಖಾನ್ ರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆಗೆ ಯತ್ನ ನಡೆದಿದೆ. ಕಬೀರ್ ಖಾನ್ ‘ಮಾರ್ಕಾರ್’ ಸೆಮಿನಾರ್ ನಲ್ಲಿ ಭಾಗವಹಿಸಿ ಲಾಹೋರ್ ಗೆ ತೆರಳುತ್ತಿದ್ದರು. ಈ ವೇಳೆ ಏರ್ ಪೋರ್ಟ್ ನಲ್ಲಿ ಗುಂಪು ಸುತ್ತುವರಿದಿತ್ತು. ಚಪ್ಪಲಿ ತೋರಿಸಿ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ.
 
 
ಕಬೀರ್ ಖಾನ್ ತಮ್ಮ ಸಿನಿಮಾಗಳಲ್ಲಿ ಪಾಕಿಸ್ತಾನವನ್ನು ‘ಭಯೋತ್ಪಾದಕರ ದೇಶ’ ಎಂಬಂತೆ ಚಿತ್ರಿಸುತ್ತಿದ್ದಾರೆ. ಹಾಗಿರುವಾಗ ಯಾವ ಮುಖವ ಇಟ್ಟುಕೊಂಡು ನಮ್ಮ ದೇಶಕ್ಕೆ ಕಾಲಿಡುತ್ತಿದ್ದೀರಿ ಎಂದು ವಿಮಾನ ನಿಲ್ದಾಣದಲ್ಲಿದ್ದ ಗುಂಪೊಂದು ಕಬೀರ್ ಖಾನ್‌ಗೆ ಘೇರಾವ್ ಹಾಕಿ ಘೋಷಣೆ ಕೂಗಿದೆ.
 
ಪಾಕಿಸ್ತಾನದ ಕರಾಚಿಯಲ್ಲಿ ಸಭೆಯೊಂದಕ್ಕೆ ತೆರಳಿದ್ದ ಕಬೀರ್ ಖಾನ್ ರನ್ನು ಅಡ್ಡಗಟ್ಟಿದ 12 ಮಂದಿಯ ಗುಂಪೊಂದು ಪಾಕಿಸ್ತಾನ ವಿರೋಧಿ ಚಿತ್ರಗಳನ್ನು ಮಾಡುತ್ತಿದ್ದೀರ ಎಂದು ಆರೋಪಿಸಿ ಪಾಕಿಸ್ತಾನಕ್ಕೆ ಜೈಕಾರ ಕೂಗಿ, ಭಾರತಕ್ಕೆ ಧಿಕ್ಕಾರ ಕೂಗಿದ್ದಾರೆ.
 
 
 
ಮೋಸ್ಟ್ ವಾಂಟೆಡ್ ಉಗ್ರ ಹಫಿಜ್ ಸಯೀದ್ ಬಂಧನ ಕುರಿತ ‘ಫ್ಯಾಂಟಮ್’ ಚಿತ್ರ ನಿರ್ದೇಶನದ ಹಿನ್ನೆಲೆಯಲ್ಲಿ ಕಬೀರ್ ಖಾನ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here