ಫೈನಲ್ ಪ್ರವೇಶಿಸಿದ ಇಂಗ್ಲೆಂಡ್

0
371

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ನಿನ್ನೆ ದೆಹಲಿಯ ಫೀರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಐಸಿಸಿ ಟಿ-20 ವಿಸ್ವಕಪ್ ಕ್ರಿಕೆಟ್ ಮೊದಲ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ವಿಜಯವಾಗಿದೆ.
ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಗೆ 7 ವಿಕೆಟ್ ಗಳ ಜಯ ಲಭಿಸಿದೆ. ನ್ಯೂಜಿಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 153 ರನ್ ಗಳಿಸಿತ್ತು. ಇಂಗ್ಲೆಂಡ್ 17.1 ಓವರ್ ಗಳಲ್ಲಿ 3 ವಿಕೆಟ್ ಗೆ 159 ರನ್ ಗಳಿಸಿ ಫೈನಲ್ ಪ್ರವೇಶಿಸಿದೆ.
 
 
ಇಂಗ್ಲೆಂಡ್ ಪರ ಜೇಸನ್ ರಾಯ್ 78, ಹೇಲ್ಸ್ 20, ಜೋ ರೂಟ್ ಅಜೇಯ 27, ಬಟ್ಲರ್ ಅಜೇಯ 32 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಪರ ಸೋಧಿಗೆ 2, ಸ್ಯಾಂಟನರ್ ಗೆ 1 ವಿಕೆಟ್ ಗಳಿಸಿದ್ದಾರೆ.  79 ರನ್ ಬಾರಿಸಿದ ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಪಿಲ್ 15, ಕೇನ್ ವಿಲಿಯಮ್ಸ್ 32, ಮನ್ರೊ 46,ಆ್ಯಂಡರ್ಸನ್ 28, ರಾಸ್ ಟೇಲರ್ 6, ಸ್ಯಾಂಟನರ್7, ಎಲಿಯಟ್ ಔಟಾಗದೆ 4ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಗೆ 3 ವಿಕೆಟ್, ಡಿ.ವಿಲ್ಲೆ, ಜೋರ್ಡನ್, ಪ್ಲಂಕೆಟ್, ಅಲಿಗೆ ತಲಾ 1 ವಿಕೆಟ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here