ಫೆ.24: ಟ್ರಂಪ್ ಭಾರತ ಭೇಟಿ

0
96

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.24 ಮತ್ತು 25ರಂದು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್ ಜತೆ ಅವರ ಪತ್ನಿ ಮೆಲಾನಿಯಾ ಟ್ರಂಪ್ ಆಗಮಿಸಲಿದ್ದು, ದಂಪತಿ ಜತೆಗೆ ಮಗಳು ಇವಾಂಕ್ ಟ್ರಂಪ್ ಮತ್ತು ಅಳಿಯ ಜಾರೆದ್ ಕುಶ್ನೆರ್ ಆಗಮಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಅಹ್ಮದಾಬಾದ್ ನ ಮೊಟೇರಾ ಕ್ರೀಡಾಂಗದಲ್ಲಿ ಟ್ರಂಪ್ ಕಾರ್ಯಕ್ರಮ ನಡೆಯಲಿದೆ. ಈ ಭೇಟಿಯಲ್ಲಿ ಟ್ರಂಪ್ ಹಲವು ಒಪ್ಪಂದ, ರ್ಯಾಲಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.ಫೆ.24ರಂದು ಟ್ರಂಪ್ ದಂಪತಿ ಆಗ್ರಾದ ತಾಜ್ ಮಹಲ್ ಗೂ ಭೇಟಿ ನೀಡಲಿದ್ದಾರೆ.

ಭಾರತಕ್ಕೆ ಕಾಲಿಟ್ಟ ಮರೈನ್ ಒನ್
ಟ್ರಂಪ್ ಅವರ ‘ದ ಬೀಸ್ಟ್’ ಕಾರು, ‘ಮರೈನ್ ಒನ್’ ಹೆಸರಿನ ಹೆಲಿಕಾಪ್ಟರ್ ಹಾಗೂ ಇನ್ನಿತರ ಸಂಪರ್ಕ ಸಾಧನಗಳನ್ನು ಹೊತ್ತ ವಿಮಾನ ಅಹಮದಬಾದ್ ನಲ್ಲಿ ಲ್ಯಾಂಡ್ ಆಗಿದೆ. ಜತೆಗೆ ಟ್ರಂಪ್ ಭದ್ರತಾ ದಳದ ಸುಮಾರು 200 ಸಿಬ್ಬಂದಿಗಳು ಸಹ ಭಾರತಕ್ಕೆ ಆಗಮಿಸಿದ್ದು, ಟ್ರಂಪ್ ಹಾದು ಹೋಗುವ ಪ್ರಮುಖ ಸ್ಥಳಗಳ ಭದ್ರತಾ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಲಿದ್ದಾರೆ.

ಭದ್ರತಾ ವ್ಯವಸ್ಥೆ
ಭದ್ರತೆಗೆ ಕೇಂದ್ರ ಸರ್ಕಾರ 10ಸಾವಿರ ಪೊಲೀಸರನ್ನು ನೇಮಿಸಿದ್ದು, ಇದರಲ್ಲಿ 25 ಐಪಿಎಸ್ ಅಧಿಕಾರಿಗಳು, 65 ಎಸಿಪಿಗಳು, 22 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಆಯ್ಕೆ ಮಾಡಲಾಗಿದೆ. ಜತೆಗೆ 6 ವಿಮಾನಗಳು ಭದ್ರತಾ ಕಾರ್ಯಕ್ಕೆ ನೇಮಕಗೊಂಡಿದೆ. 10 ಹೆಲಿಕಾಪ್ಟರ್ ಗಳು ಹಾಗೂ ಬುಲೆಟ್ ಪ್ರೂಫ್ ಕಾರುಗಳನ್ನು ನಿಯುಕ್ತಿಗಳಿಸಲಾಗಿದೆ.

LEAVE A REPLY

Please enter your comment!
Please enter your name here