ಫೆಬ್ರವರಿ 23: ಬೆಳ್ತಂಗಡಿ ತಾಲೂಕು ೧೭ನೆಯ ಕನ್ನಡ ಸಾಹಿತ್ಯ ಸಮ್ಮೇಳನ

0
3415


ಪೆರಿಂಜೆ: ಕೊರೊನಾ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬೆಳ್ತಂಗಡಿ ತಾಲೂಕು ೧೭ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಯಥಾವತ್ತಾಗಿ ಫೆಬ್ರವರಿ ೨೩ರಂದು ಹೊಸಂಗಡಿ ಗ್ರಾಮದ ಪೆರಿಂಜೆ ಪಡ್ಡ್ಯಾರಬೆಟ್ಟ ಸಂತೃಪ್ತಿ ಸಭಾ ಭವನದಲ್ಲಿ ದಿನಪೂರ್ತಿ ಸರಕಾರದ ಮಾರ್ಗಸೂಚಿಯಂತೆ ನಡೆಸುವುದಾಗಿ ಸಮ್ಮೇಳನದ ಸಂಯೋಜನ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಜಿ.ರಾಮನಾಥ್‌ ಭಟ್‌ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ.ರಾಮಕೃಷ್ಣ ಶಾಸ್ತ್ರಿ ಉಪಸ್ಥಿತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತೀ ವಿ ಹೆಗ್ಗಡೆಯವರು ಉದ್ಘಾಟಿಸುವರು. ಸಮ್ಮೇಳನದ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಎ.ಜೀವಂಧರ್‌ ಕುಮಾರ್‌ ಪಡ್ಯೋಡಿಗುತ್ತು, , ಶಾಸಕ ಹರೀಶ್‌ ಪೂಂಜ, ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ , ಸದಸ್ಯ ಓಬಯ್ಯ, ಉಪಸ್ತಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪ್‌ ಕುಮಾರ್‌ ಕಲ್ಕೂರ ಆಶಯ ನುಡಿ ನುಡಿಯುವರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಿ.ಯಶೋವರ್ಮ ಪ್ರಾಸ್ತಾವಿಕ ಮಾತುಗಳನ್ನಾಡುವರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀನಾಥ್‌ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಮಾರ್ಗದರ್ಶನವಿತ್ತರು. ಸೋಮಶೇಖರ್‌ ಶೆಟ್ಟಿ ಉಜಿರೆ ಸಲಹೆಗಳನ್ನಿತ್ತರು.
ಸಮ್ಮೇಳನದ ಸಂಯೋಜನಾ ಸಮಿತಿ ಅಧ್ಯಕ್ಷ ಪೆರಿಂಜೆಗುತ್ತು ಪಿ.ಜಯರಾಜ್‌ ಕಂಬಳಿ, ಕಾರ್ಯಾಧ್ಯಕ್ಷ ಪಿ.ಧರಣೇಂದ್ರ ಕುಮಾರ್‌, ಸ್ವಾಗತ ಸಮಿತಿ ಪ್ರಮುಖ್‌ ವಿಕಾಸ್‌ ಜೈನ್‌ ಬಾಲ್ನಗುತ್ತು, ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಜೈನ್‌ ಎರ್ಮೋಡಿ, ಕಾರ್ಯದರ್ಶಿ ಮುಕುಂದ ಚಂದ್ರ ಎಲ್‌ ಎನ್‌, ಜೊತೆಕಾರ್ಯದರ್ಶಿ ಸುಧಾಕರ ಶೆಟ್ಟಿ, ಕೋಶಾಧಿಕಾರಿ ಎಚ್‌ ಆಲಿಯಬ್ಬ, ಪಿ.ಡಿ.ಒ ಗಣೇಶ್‌ ಶೆಟ್ಟಿ, ಸ್ಮರಣ ಸಂಚಿಕೆ ಸಮಿತಿಯ ಪ್ರಮುಖ ಶಂಕರ್‌ ಭಟ್‌ ಬಾಲ್ಯ, ಮಾಧ್ಯಮ ಪ್ರಚಾರ ಸಮಿತಿ ಪ್ರಮುಖ್‌ ಹರೀಶ್‌ ಕೆ.ಆದೂರು, ಪ್ರಧಾನ ಸಂಚಾಲಕ ಇಸ್ಮಾಯಿಲ್‌ ಕೆ ಪೆರಿಂಜೆ, ಪಂಚಾಯತ್‌ ಸದಸ್ಯರುಗಳಾದ ಹರಿಪ್ರಸಾದ್‌, ಕರುಣಾಕರ, ಜಗದೀಶ್‌ ಹೆಗ್ಡೆ, ಪ್ರಕಾಶ್‌ ದೇವಾಡಿಗ, ಕಾರ್ಯಕ್ರಮ ಸಂಯೋಜನಾ ಸಮಿತಿ ಪ್ರಮುಖ್‌ ಮಹಾವೀರ್‌ ಜೈನ್‌, ರಾಜೇಶ್‌ ನೆಲ್ಲಿಯಾಡಿ, ಶರ್ಮಿತ್‌ ಎರ್ಮೋಡಿ, ರೋಶನ್‌ ಉಪಸ್ಥಿತರಿದ್ದರು.
ಯಶಸ್ವೀ ಸಮ್ಮೇಳನ: ೧೭ನೇಯ ಸಾಹಿತ್ಯ ಸಮ್ಮೇಳನ ಯಶಸ್ವೀ ಸಮ್ಮೇಳನವಾಗಿ ಮೂಡಿಬರಲು ಸಮಿತಿಯ ಸರ್ವ ಸದಸ್ಯರು ಕನ್ನಡಾಸಕ್ತ ಬಂಧುಗಳು ಕಟಿಬದ್ಧರಾಗಬೇಕೆಂದು ಸಂಯೋಜನಾ ಸಮಿತಿ ಕಾರ್ಯಾಧ್ಯಕ್ಷ ಪಿ.ಧರಣೇಂದ್ರ ಕುಮಾರ್‌ ಕರೆನೀಡಿದರು. ಸಮಯ ಪ್ರಜ್ಞೆಯೊಂದಿಗೆ, ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸುವ ಇರಾದೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here