ಫಲಿತಾಂಶ ಪ್ರಕಟ: ಮಂಗಳೂರು ತೃತೀಯ ಸ್ಥಾನ

0
265

 
ಬೆಂಗಳೂರು ಪ್ರತಿನಿಧಿ ವರದಿ
ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಸ್ ಎಸ್ ಎಲ್ ಬೋರ್ಡ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
 
 
ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ 3,082 ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ಮಾರ್ಚ್-ಏಪ್ರಿಲ್’ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು 13,993 ಶಾಲೆಗಳಲ್ಲಿ 8,49,233 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಶೇ.79.16ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ಶೇ.82.64ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ. 75.84ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
 
 
625 ಅಂಕಗಳಿಗೆ 625 ಅಂಕ ಗಳಿಸಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ಎಸ್ ರಂಜನ್ ಪ್ರಥಮ ಸ್ಥಾನ ಪಡೆದಿದ್ದಾರೆ. 625ಕ್ಕೆ 624 ಅಂಕ ಪಡೆದ ಬೆಂಗಳೂರಿನ ಬನಶಂಕರಿ ಹೋಲಿ ಚೈಲ್ಡ್ ಶಾಲೆಯ ವಿದ್ಯಾರ್ಥಿನಿ ಸುಪ್ರೀತ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
 
 
ಈ ಬಾರಿ ಸರ್ಕಾರಿ ವೆಬ್ ಸೈಟ್ ನಲ್ಲಿ ಮಾತ್ರ ಫಲಿತಾಂಶ ಲಭ್ಯವಾಗಲಿದೆ. ಇಂದು ಸಂಜೆ 4ಗಂಟೆಯ ಬಳಿಕ ಫಲಿತಾಂಶ ಲಭ್ಯವಾಗಲಿದೆ. ವೆಬ್ ವಿಳಾಸ: www.karresults.nic.in ಮತ್ತು www.sslc.kar.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ.  ನಾಳೆ ಬೆಳಗ್ಗೆ 10 ಗಂಟೆಗೆ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
 
 
 
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನ( ಶೇ.89.63ರಷ್ಟು ಉತ್ತೀರ್ಣ) ಪಡೆದಿದೆ. ದ್ವಿತೀಯ ಸ್ಥಾನ ಉಡುಪಿ ಜಿಲ್ಲೆ(ಶೇ.89.52ರಷ್ಟು ಫಲಿತಾಂಶ) ಪಡೆದಿದ್ದು, ಮಂಗಳೂರು ತೃತೀಯ ಸ್ಥಾನ(88.01 ಫಲಿತಾಂಶ) ಪಡೆದಿದೆ. ಬಳ್ಳಾರಿ ಜಿಲ್ಲೆ(56.68%ಫಲಿತಾಂಶ) ಕೊನೆಯ ಸ್ಥಾನ ಪಡೆದಿದೆ.
 
ಕಳೆದ ವರ್ಷಕ್ಕಿತ ಈ ಬಾರಿ 2ರಷ್ಟು ಫಲಿತಾಂಶ ಕಡಿಮೆಯಾಗಿದೆ. ಮೂರು ಸರ್ಕಾರಿ ಶಾಲೆ ಸೇರಿ 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶವಿದೆ. ಅನುತೀರ್ಣರಾದವರಿಗೆ ಜೂನ್ 20ರಿಂದ 27ರವರೆಗೆ ಮರು ಪರೀಕ್ಷೆ ನಡೆಸಲಾಗುತ್ತದೆ. ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ ಉಪಸ್ಥಿತರಿದ್ದರು.
 
 
ಜಿಲ್ಲೆಗಳ ಫಲಿತಾಂಶದ ವಿವರ:
ಎಸ್ಎಸ್ಎಲ್’ಸಿ ಫಲಿತಾಂಶ ಮೊದಲ 6 ಸ್ಥಾನಗಳಲ್ಲಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನ- ಶೇ.89.63ರಷ್ಟು, ಉಡುಪಿಗೆ 2ನೇ ಶೇ. 89.52ರಷ್ಟು, ಮಂಗಳೂರು ಮೂರನೇ ಸ್ಥಾನ ಶೇ 88.01ರಷ್ಟು, ಉತ್ತರ ಕನ್ನಡಕ್ಕೆ 4ನೇ ಸ್ಥಾನ ಶೇ.87.83ರಷ್ಟು, ಚಿಕ್ಕಮಗಳೂರು 5ನೇ ಸ್ಥಾನದಲ್ಲಿ ಶೇ. 86.29ರಷ್ಟು, 6ನೇ ಸ್ಥಾನಕ್ಕೆ ತೃಪ್ತಿಪಟ್ಟ ಚಿಕ್ಕೋಡಿ ಶೇ.86ರಷ್ಟು ಫಲಿತಾಂಶ ಪಡೆದಿದೆ.
ನಂತರ ಕ್ರಮವಾಗಿ ಬಾಗಲಕೋಟೆ ಶೇ.85.21, ಮೈಸೂರು ಶೇ.85.56, ಧಾರವಾಢ ಜಿಲ್ಲೆಯಲ್ಲಿ ಶೇ.85.17, ರಾಯಚೂರು ಜಿಲ್ಲೆಯ ಶೇ.82.29, ರಾಮನಗರ ಜಿಲ್ಲೆಯ ಶೇ.81.74, ಬೆಳಗಾವಿ ಜಿಲ್ಲೆಯ ಶೇ.81.09, ಚಿಕ್ಕಬಳ್ಳಾಪುರ 80.92, ಬೆಂಗಳೂರು ಉತ್ತರ 80.52, ಮಧುಗಿರಿ 80.25, ಕಲಬುರಗಿ 79.02, ಕೊಡಗು 78.93, ದಾವಣಗೆರೆ 78.43, ಕೊಲಾರ 78.19, ಮಂಡ್ಯ 77.98, ಶಿವಮೊಗ್ಗ 77.57, ತುಮಕೂರು 76.10, ಹಾಸನ 75.94, ಬೀದರ್ 75.93, ಕೊಪ್ಪಳ 75.92, ಚಾಮರಾಜನಗರ 75.59, ಹಾವೇರಿ 74.55, ಚಿತ್ರದುರ್ಗ 73.19, ಬೆಂಗಳೂರು ದ 72.80, ಕೊಪ್ಪಳ 75.92, ಚಾಮರಾಜನಗರ 75.59, ಹಾವೇರಿ 74.55, ಚಿತ್ರದುರ್ಗ 73.19, ಬೆಂಗಳೂರು ದ ಶೇ.72.80ರಷ್ಟು ಫಲಿತಾಂಸ ಪಡೆದಿದೆ.
 
 
 
625ಕ್ಕೆ 624 ಅಂಕ ಗಳಿಸಿ ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿದವರು
ಬೆಂಗಳೂರಿನ ನಾಗರಬಾವಿಯಲ್ಲಿರುವ ಸೇಂಟ್ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್ ವಿದ್ಯಾರ್ಥಿನಿ ಶ್ವೇತಾ ಎಸ್.
ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸೇಂಟ್ ಮೇರಿ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾರ್ಥಿನಿ ಶುಶೃತಾ ಯು.ಕೆ.
ಬೆಂಗಳೂರಿನ ಬನಶಂಕರಿ ಹೋಲಿ ಚೈಲ್ಡ್ ಇಂಗ್ಲೀಷ್ ಶಾಲೆಯ ವಿದ್ಯಾರ್ಥಿನಿ ಸುಪ್ರೀತ ಎಂ.ಎ.
ಮೈಸೂರಿನ ಮರಿಮಲ್ಲಪ್ಪ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಈಶು ಎನ್. ಎಸ್.
ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಲೇಕಲ್ ಶಾಲೆ
ಶ್ರೀ ಸಿಕೆಎಸ್ ಗರ್ಲ್ಸ್ ಶಾಲೆ ಸ್ವಾತಿ ಎಸ್.
ಮೈಸೂರಿನ ಕುವೆಂಪುನಗರದಲ್ಲಿರುವ ವಿಜಯವಿಠ್ಠಲ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾರ್ಥಿ ಅಕ್ಷಯ್ ರಾವ್ ಕೆ.

LEAVE A REPLY

Please enter your comment!
Please enter your name here