ಪ್ರೌಢ ಶಾಲಾ ಶಿಕ್ಷಕರಿಗೆ ಗಣಿತ ಪಠ್ಯಕ್ರಮ ತರಬೇತಿ

0
401

ಮಂಗಳೂರು ಪ್ರತಿನಿಧಿ ವರದಿ
ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 06.10.2016 ಮತ್ತು 07.10.2016 ರವರೆಗೆ ದ. ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಗಣ್ತ ಪಠ್ಯಕ್ರಮ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು ಇವರು ಪ್ರಾಯೋಜಿಸಿದ್ದರು.
 
mnglr_workshop
ಈ ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನೆಯನ್ನು ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಪುರುಷೋತ್ತಮ ನೆರವೇರಿಸಿ ಮಾತನಾಡುತ್ತಾ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮ ಪಡಿಸಲು ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ತರಬೇತಿಯನ್ನು ಆಯೋಜಿಸಿದ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಏಖಅಖಖಿ ಇವರಿಗೆ ಕೃತಜ್ಞತೆಗಳನ್ನು ತಿಳಿಸಿ ಶಿಕ್ಷಕರು ಗಣಿತ ವಿಷಯವನ್ನು ಮಾದರಿಗಳ ಮೂಲಕ ಹಾಗೂ ಗಣಿತ ಲ್ಯಾಬ್ ಮೂಲಕ ಬೋಧಿಸಿತ್ತಿರುವುದು ಅಭಿನಂದನೀಯವಾಗಿದೆ ಎಂದು ತಿಳಿಸಿದರು.
 
 
ರಘುನಾಥ ಭಟ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ದ. ಕ. ಜಿಲ್ಲೆಯ ಅಧ್ಯಕ್ಷರಾದ ಸ್ಟ್ಯಾನಿ ತಾವ್ರೋ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಯಾಕುಬ್ ಕೊಯ್ಯುರ್ ಹಾಗೂ ಸದಾಶಿವ ಪೂಜಾರಿ ಉಪಸ್ಥಿತರಿದ್ದರು. ಅರುಣಕುಮಾರ ಶೆಟ್ಟಿ ಧನ್ಯವಾದ ಸಮರ್ಪಣೆಗೈದರು. ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.
 
ನಂತರ ನಡೆದ ಅಧಿವೇಶನದಲ್ಲಿ ಯಾಕುಬ್ ಕೊಯ್ಯುರ್ ಗಣಿತ ಪ್ರಯೋಗಾಲಯ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು.
ಎರಡನೇ ಅಧಿವೇಶನದಲ್ಲಿ ಸದಾಶಿವ ಪೂಜಾರಿ ಸರಳ ರೀತಿಯಲ್ಲಿ ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಕುರಿತು ತಿಳಿಸಿದರು.
ಮೂರನೇ ಅಧಿವೇಶನದಲ್ಲಿ ಡಾ. ಆಡ್ಲೇಡ್ ಸಲ್ಡಾನ್ಹ ಇವರು ಗಣಿತದಲ್ಲಿ ಒರಿಗಾಮಿ ಕುರಿತು ಹೇಳಿಕೊಟ್ಟರು.
 
ಎರಡನೇ ದಿನದ ಮೊದಲನೇ ಅಧಿವೇಶನದಲ್ಲಿ ಪ್ರೊ. ವಿಜಯಾ ಕುಮಾರಿ ತ್ರಿಕೋನಮಿತಿ ಕುರಿತು ವಿವರಿಸಿದರು. ಪುರುಷೋತ್ತಮ ಪ್ರಶ್ನೆಪತ್ರಿಕೆ ತಯಾರಿ ಕುರಿತು ಮಾಹಿತಿ ನೀಡಿದರು. ಮಧ್ಯಾಹ್ನದ ನಂತರದ ಅಧಿವೇಶನದಲ್ಲಿ ಡಾ. ರಾಘವೇಂದ್ರ ರಾವ್ ಸಂಭವನೀಯತೆ ಮತ್ತು ನಿರ್ದೆಶಾಂಕ ರೇಖಾಗಣಿತ ಕುರಿತ ಸಮಸ್ಯೆಗಳನ್ನು ಬಿಡಿಸಿ ಸಂದೇಹಗಳನ್ನು ಬಗೆಹರಿಸಿದರು.

LEAVE A REPLY

Please enter your comment!
Please enter your name here