ಪ್ರೋತ್ಸಾಹ ಧನ

0
647

ವರದಿ:ಲೇಖಾ
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳಸಲು ಕ್ರೀಡಾ ಸಂಘಗಳ ಸ್ಥಾಪನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೊಂದು ಕ್ರೀಡಾ ಮತ್ತು ಸಂಘವನ್ನು ಸ್ಥಾಪಿಸಿ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಪ್ರತಿಭೆಗಳನ್ನು ಗುರುತಿಸಲು ಯುವ ಸಬಲೀಕರಣ ಕ್ರೀಡಾ ಇಲಾಖೆಯು ಪ್ರೋತ್ಸಾಹಧನವಾಗಿ ಪ್ರತಿ ಹೋಬಳಿಗೆ ಒಂದು ಕ್ರೀಡಾ ಸಂಘಕ್ಕೆ ವಾರ್ಷಿಕ ತಲಾ 25 ಸಾವಿರ ನಗದು ಪ್ರೋತ್ಸಾಹ ಧನ ನೀಡಲಿದೆ.
 
 
 
ಅರ್ಹ ಹಾಗೂ ನೋಂದಾವಣೆಗೊಂಡಿರುವ ಕ್ರೀಡಾ/ಸಂಘ ಸಂಸ್ಥೆಗಳು ಕ್ರೀಡಾ ವರದಿಗಳನ್ನೊಳಗೊಂಡ, ಪೋಟೊ ಪ್ರತಿ ಸಮೇತ ನೋಂದಾವಣೆಯಾಗಿರುವ ಸಂಸ್ಥೆಗಳ ವಿವರಗಳೊಂದಿಗೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಕೋರಿದೆ.
 
 
 
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು. ದೂರವಾಣೆ ಸಂಖ್ಯೆ: 08022239771, ಮೊಬೈಲ್ ಸಂಖ್ಯೆ: 9480886470 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here