ಪ್ರೊ. ಬಿ. ತಿಮ್ಮೇಗೌಡ ದತ್ತಿ ಉಪನ್ಯಾಸ

0
286

 
ನಮ್ಮ ಪ್ರತಿನಿಧಿ ವರದಿ
ಪ್ರೊ. ಬಿ. ತಿಮ್ಮೇಗೌಡ ಅವರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಮಾಡಿದ ವಿದ್ಯಾರ್ಥಿಗಳು, ಬೆಂಗಳೂರು ವಿಶ್ವವಿದ್ಯಾಲಯ ಉಪ ಕುಲಪತಿಯಾಗಿ ನೇಮಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಪ್ರೊ. ಬಿ. ತಿಮ್ಮೇಗೌಡರ ಸನ್ಮಾನ ಸಮಿತಿ ರಚಿಸಿದ್ದಾರೆ. ಸಮಿತಿಯು ಪ್ರೊ. ತಿಮ್ಮೇಗೌಡ ಅವರ ಹೆಸರಿನಲ್ಲಿ ಚಿನ್ನದ ಪದಕ ಹಾಗೂ ದತ್ತಿ ಉಪನ್ಯಾಸವನ್ನು ಮಂಗಳೂರು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಹಮ್ಮಿಕೊಂಡಿದೆ. ಪ್ರತಿ ವರ್ಷ ಮಂಗಳೂರು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ಎಂ.ಎಸ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ ಖ್ಯಾತ ವ್ಯಕ್ತಿಗಳಿಂದ ರಸಾಯನ ಶಾಸ್ತ್ರ ಕ್ಷೇತ್ರದಲ್ಲಿ ದತ್ತಿ ಉಪನ್ಯಾಸವನ್ನು ಕೂಡ ಏರ್ಪಡಿಸಲಾಗುತ್ತದೆ.
 
 
 
2015-16ನೇ ಸಾಲಿನ ಪ್ರೊ. ತಿಮ್ಮೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮವು ರಸಾಯನ ಶಾಸ್ತ್ರ ವಿಭಾಗದಲ್ಲಿ ನಡೆಯಿತು. ಪ್ರೊ. ವಿಜಯ್ ಮೋಹನ್ ಕೆ. ಪಿಳ್ಳೈ, ಸಿಎಸ್ಐಆರ್-ಸಿಇಸಿಆರ್ ಐ ಕರೈಕುಡಿ, ತಮಿಳುನಾಡು ಇವರು ಉಪನ್ಯಾಸ ನೀಡಿದರು.
 
 
 
ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಪಿಳ್ಳೈಯವನ್ನು ಸ್ವಾಗತಿಸಿ, ಸಭಿಕರಿಗೆ ಪರಿಚಯಿಸಿದರು. ಬಳಿಕ ಪ್ರೊ. ಪಿಳ್ಳೈ ಅವರಿಂದ ಉಪನ್ಯಾಸ ನಡೆಯಿತು. ವಿದ್ಯುತ್ ಮತ್ತು ಪರಿಸರ ಕ್ಷೇತ್ರದಲ್ಲಿ 21ನೇ ಶತಮಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿನ್ಯಾಸಗೊಳಿಸಲಾದ ಆಧುನಿಕ ಸಾಮಗ್ರಿಗಳ ಬಗ್ಗೆ ಮಾತನಾಡಿ, ಅವುಗಳ ವಿನ್ಯಾಸದಲ್ಲಿ ರಸಾಯನ ಶಾಸ್ತ್ರದ ಪಾತ್ರವನ್ನು ವಿವರಿಸಿದರು. ಉಪ ಕುಲಪತಿ ಪ್ರೊ. ಬೈರಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು. ಗೌರವ ಉಪನ್ಯಾಸಕಿ ಅಕ್ಷತಾ ಸಾಲಿಯಾನ್ ಧನ್ಯವಾದ ಸಮರ್ಪಿಸಿದರು. ಸಂಶೋಧಕಿ ಸಂಗೀತಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರೊ. ಬಿ. ತಿಮ್ಮೇ ಗೌಡರ ಕೆಲವು ಪಿಎಚ್ಡಿ ಹಳೆ ವಿದ್ಯಾರ್ಥಿಗಳು ಮತ್ತು ರಸಾಯನ ಶಾಸ್ತ್ರ ವಿಭಾಗದ ಮಾಜಿ ಬೋಧಕ ಸಿಬ್ಬಂದಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
 
 
ಉಪನ್ಯಾಸದ ಸಾರಾಂಶ
ಆಧುನಿಕ ಸಾಮಗ್ರಿಗಳ ಮೂಲಕ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರಸಾಯನ ಶಾಸ್ತ್ರದ ಪಾತ್ರ
ವಿದ್ಯುತ್ ಮತ್ತು ಪರಿಸರ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉದ್ದೇಶದ ಆಧುನಿಕ ಸಾಮಗ್ರಿಗಳ ವಿನ್ಯಾಸದಲ್ಲಿ ರಸಾಯನ ಶಾಸ್ತ್ರದ ಪಾತ್ರ ಮಹತ್ವದ್ದಾಗಿದೆ. ಪರಿಸರದಲ್ಲಿ ಆಗಿರುವ ಬದಲಾವಣೆಗೆ ಈ ಸಾಮಗ್ರಿಗಳು ಸೂಕ್ತವಾಗಿ ಸ್ಪಂದಿಸುತ್ತಿದ್ದು, ಇವುಗಳನ್ನು ಸ್ಮಾರ್ಟ್/ ಇಂಟಲಿಜೆಂಟ್ ಸಾಮಗ್ರಿ ಎಂದು ಕರೆಯಲಾಗುತ್ತದೆ.
 
ಸ್ವಯಂ ಪರೀಕ್ಷೆ, ಸ್ವಯಂ ಟ್ಯೂನಿಂಗ್, ಸೂಕ್ಷ್ಮತೆ, ಆಕಾರ ನೀಡಿಕೆ, ಸ್ವಯಂ ಪುನರುಜ್ಜೀವನ, ಸ್ವಯಂ ದುರಸ್ತಿ, ಬದಲಾಗುವಿಕೆ ಇತ್ಯಾದಿ ವಿಸ್ತೃತ ಕೆಲಸಗಳನ್ನು ಸ್ಮಾರ್ಟ್ ಸಾಮಗ್ರಿಗಳು ಮಾಡುತ್ತವೆ. ಈ ಉಷ್ಣತೆ,   ರಸಸಾರ, ಅಣು ಸಾಮರ್ಥ್ಯ ಇತ್ಯಾದಿಗಳ ಬದಲಾವಣೆಯೊಂದಿಗೆ ಸ್ವಯಂ ಹೊಂದಿಕೊಳ್ಳುವ 3ಡಿ ಪಾಲಿಮರ್ ನೆಟ್ ವರ್ಕ್ ಎಂಬ ಸ್ಮಾರ್ಟ್ ಪಾಲಿಮರಿಕ್ ಜೆಲ್ ಕೂಡ ಈ ಸಾಮಗ್ರಿಗಳಲ್ಲಿ ಸೇರಿದೆ. ಇದು ನಾಡಿ ಮಿಡಿತಕ್ಕೆ ಅನುಗುಣವಾಗಿ ಔಷಧ ಒದಗಿಸುವ, ಇಲೆಕ್ಟ್ರೋಕೆಮಿಕಲ್ ಸೆನ್ಸಾರ್ಗಳನ್ನು ಹೊಂದಿದ ವಿದ್ಯುನ್ಮಾನ ಮೂಗು, ಕೃತಕ ಮಾಂಸಖಂಡ, ಸ್ವಯಂ ಸ್ವಚ್ಛಕಾರಕಗಳು ಕೂಡ ಇದರಲ್ಲಿ ಸೇರಿವೆ.
 
ಸ್ವಯಂ ಜೋಡಿಕೆಯಾಗುವ ಮಾನೋಲೇಯರ್ ಆಫ್ ಒಕ್ಟೋಡಿಸೈಲ್ಟ್ರಿಚ್ಲೊರೊಸಿಲೇನ್ ಆನ್ ಗ್ಲಾಸ್, ಟ್ರಾನ್ಸ್ಫಾರ್ಮೇಶನ್ ಆಫ್ ಕಾರ್ಬನ್ ನ್ಯಾನೋಟ್ಯೂಬ್ ಟು ಗ್ರಾಫೇನ್ ರಿಬ್ಬನ್ಸ್ ಮತ್ತು ಕ್ವಾಂಟಂ ಡಾಟ್ಸ್ ಬೈ ಇಲೆಕ್ಟ್ರೋಕೆಮಿಕಲ್ ಮೆಥಡ್ಸ್ ಮತ್ತು ಫುಯೆಲ್ ಸೆಲ್ ಮತ್ತು ಎಲ್ಇಡಿ, ಫೋಟೋವೋಲ್ಟಾಯಿಕ್ ಕೋಶಗಳು, ಲಿ-ಐಯಾನ್ ಬ್ಯಾಟರಿಗಳಂತಹ ವಿದ್ಯುತ್ ಸಂಬಂಧಿ ಉಪಕರಣಗಳಲ್ಲಿ ಪೋಟೆನ್ಶಿಯಲ್ ಅಪ್ಲಿಕೇಶನ್ಸ್ ಆಫ್ ಗ್ರಾಫೇನ್ ಕ್ವಾಂಟನ್ ಡಾಟ್ಸ್ ಪ್ರಭಾವ ಮತ್ತು ಸೂಪರ್ ಕೆಪಾಸಿಟರ್ಗಳ ಕುರಿತು ಚರ್ಚಿಸಲಾಯಿತು. ಇಂತಹ ಸ್ಮಾರ್ಟ್ ಸಾಮಗ್ರಿಗಳನ್ನು ವಿದ್ಯುತ್ ಉತ್ಪಾದನೆ ಮತ್ತು ಸಂಗ್ರಹವನ್ನು ಪರಿಣಾಮಕಾರಿಯಾಗುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ.

LEAVE A REPLY

Please enter your comment!
Please enter your name here