ಪ್ರೀತಿಗಾಗಿ ಆತ್ನಹತ್ಯೆಗೆ ಶರಣಾದ ಯುವಕ

0
445

ಕೊಪ್ಪಳ ಪ್ರತಿನಿಧಿ ವರದಿ
ಪ್ರೀತಿಸಿದ ಹುಡುಗಿ ಜತೆ ಮದುವೆಗೆ ಯುವತಿ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ನಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ನಡೆದಿದೆ.
 
 
ಯುವತಿ ಪೋಷಕರ ವಿರೋಧದಿಂದ ನೊಂದ ಯುವಕ ಯುವತಿಯ ನಿವಾಸ ಮುಂದೆ ವಿಷ ಸೇವಿಸಿದ್ದಾನೆ. ಬಳಿಕ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಅಸ್ವಸ್ಥ ಯುವಕ ಕಿರಣ್ ಮೃತಪಟ್ಟಿದ್ದಾನೆ.
 
 
ಅಲ್ಲದೆ ಸಾವಿಗೂ ಮುನ್ನ ಮೃತ ಯುವಕ ಸೆಲ್ಫಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾನೆ. ಮೃತ ಯುವಕ ಗಂಗಾವತಿ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದ ನಿವಾಸಿಯಾಗಿದ್ದಾನೆ. ಈ ಘಟನೆ ಅ.10ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.
 
ಕಿರಣ್ 2ವರ್ಷದಿಂದ ಮುನಿರಾಬಾದ್ ನ ಯುವತಿಯನ್ನು ಪ್ರೀತಿಸುತ್ತಿದ್ದ. ಅದ್ರೆ ಯುವತಿಯ ಪೋಷಕರು ಬೇರೊಬ್ಬರ ಜೊತೆ ಮದುವೆಗೆ ಮುಂದಾಗಿದ್ದರು. ಇದರಿಂದ ನೊಂದು ಯುವಕ ಆತ್ನಹತ್ಯೆಗೆ ಶರಣಾಗಿದ್ದಾನೆ.
ಯುವತಿಯ ಸಂಬಂಧಿಕರ ವಿರುದ್ಧ ಕ್ರಮಕೈಗೊಳ್ಳುವಂತೆ ಆತ್ಮಹತ್ಯೆಗೆ ಶರಣಾಗಿರುವ ಯುವಕ ಕಿರಣ್ ಪೋಷಕರು ಆಗ್ರಹಿಸಿದ್ದಾರೆ.ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಕಿರಣ್ ಹಾಗೂ ಈತನ ಸಂಬಂಧಿ ಶ್ರಾವ್ಯಾ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು. ಹುಬ್ಬಳಿಯಲ್ಲಿ ಆ್ಯನಿಮೆಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಬಿಇ ಓದುತ್ತಿದ್ದ ಶ್ರಾವ್ಯಾ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ರು. ಈ ವಿಷಯ ಶ್ರಾವ್ಯ ಮನೆಯವ್ರಿಗೆ ಗೊತ್ತಾಗಿ ಆಕೆಗೆ ಬೇರೆ ಮದುವೆ ಮಾಡೋಕೆ ಸಿದ್ಧತೆ ಮಾಡ್ತಿದ್ರು. ಇದನ್ನ ತಿಳಿದ ಕಿರಣ್‍ಕುಮಾರ್ ಶ್ರಾವ್ಯಾಳ ಮನೆಗೆ ಹೋಗಿ ಗಲಾಟೆ ಮಾಡಿದಾಗ ನಾನು ನಿನ್ನನ್ನ ಮದುವೆಯಾಗೋದಿಲ್ಲವೆಂದು ಪ್ರೀತಿಸಿದ ಯುವತಿ ಹೇಳಿದ್ದಾಳೆ. ಇದರಿಂದ ನೊಂದ ಕಿರಣ್, ಮೊಬೈಲ್‍ನಲ್ಲಿ ಸೆಲ್ಫಿ ವೀಡಿಯೋ ಮಾಡಿ ಅದನ್ನ ತನ್ನ ಅಕ್ಕನಿಗೆ ಕಳಿಸಿ ಶ್ರಾವ್ಯಾ ಮನೆ ಎದುರಲ್ಲೇ ವಿಷ ಸೇವಿಸಿದ್ದಾನೆ. ಇಷ್ಟಾದರೂ ಶ್ರಾವ್ಯಾ ಮನೆಯವರು ಇದಕ್ಕೆ ಕೇರ್ ಮಾಡ್ಲಿಲ್ಲ. ಬಳಿಕ ಪೋಷಕರು ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕಿರಣ್ ಸಾವನ್ನಪ್ಪಿದ್ದಾನೆ.

LEAVE A REPLY

Please enter your comment!
Please enter your name here