ಪ್ರಿಯಾಂಕಾಗೆ ಪ್ರಚಾರ ಉಸ್ತುವಾರಿ

0
264

 
ವರದಿ:ಲೇಖಾ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದ್ದು, ಪ್ರಿಯಾಂಕಾ ವಾದ್ರಾರಿಗೆ ಪ್ರಚಾರ ಉಸ್ತುವಾರಿ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
 
 
ಈವರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷೇತ್ರ ರಾಯ್ ಬರೇಲಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಷೇತ್ರ ಅಮೇಠಿಯಲ್ಲಿನ ಪ್ರಚಾರಕ್ಕೆ ಸೀಮಿತವಾಗಿದ್ದ ಪ್ರಿಯಾಂಕಾ ಈಗ ರಾಜ್ಯಾದ್ಯಂತ ಸಂಚರಿಸಿ, ಪಕ್ಷಕ್ಕೆ ಹೆಚ್ಚಿನ ಬಲ ತುಂಬಲಿದ್ದಾರೆ ಎಂದು ಉತ್ತರಪ್ರದೇಶ ಕಾಂಗ್ರೆಸ್ ವಕ್ತಾರ ಸತ್ಯದೇವ್ ತ್ರಿಪಾಠಿ ತಿಳಿಸಿದ್ದಾರೆ.
 
 
ಪ್ರಿಯಾಂಕಾರನ್ನು ಚುನಾವಣಾ ಪ್ರಚಾರ ಮುಖ್ಯಸ್ಥೆಯಾಗಿ ಶೀಘ್ರದಲ್ಲೇ ಅಧಿಕೃತ ಘೊಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಈ ತಿಂಗಳಿಂದಲೇ ಚುನಾವಣಾ ಪ್ರಚಾರ ಆರಂಭಿಸಲಿದ್ದು, 150 ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here