ಪ್ರಾಚೀನ ಸ್ಮಾರಕಗಳ ರಕ್ಷಣೆಅಗತ್ಯ :ಡಾ. ಡಿ. ವಿರೇಂದ್ರ ಹೆಗ್ಗಡೆ

0
1207

ಉಜಿರೆ ಪ್ರತಿನಿಧಿ ವರದಿ
ಪ್ರಾಚೀನ ಸ್ಮಾರಕಗಳು ನಮ್ಮ ಸಾಂಸ್ಕೃತಿಕದ್ಯೋತಕವಾಗಿದ್ದು, ಸಾಕಷ್ಟು ದೇವಾಲಯಗಳು ದುರವಸ್ಥೆಯಲ್ಲಿವೆ. ಅವುಗಳನ್ನು ನಮ್ಮ ಸರ್ಕಾರಗಳು ಸಂರಕ್ಷಿಸುವಅಗತ್ಯವಿದೆಎಂದು ಧರ್ಮಸ್ಥಳದ ಧರ್ಮಾಧಿಕಾರಿಡಾ. ಡಿ. ವಿರೇಂದ್ರ ಹಗ್ಗಡೆಯವರು ಅಭಿಪ್ರಾಯಪಟ್ಟರು.
 
 
ಧರ್ಮಸ್ಥಳದ ವಸಂತ ಮಹಲ್ನಲ್ಲಿ ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗ ಹಮ್ಮಿಕೊಂಡಿದ್ದ ಕಂಗೇರಿ ಚಕ್ರಪಾಣಿಯವರ `ದೇಗುಲಗಳ ದಾರಿ, ಭಾಗ-3′ ಹಾಗೂ ಚಿಂತಾಮಣಿ ಕೂಡ್ಲೆಕೆರೆಯವರ `ಗುಡಿಗೋಪುರಗಳ ಸುತ್ತಮುತ್ತ’ ಕೃತಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ, ಕೃತಿಗಳನ್ನು ಅನಾವರಣಗೊಳಿಸಿ ಅವರು ಮಾತಾನಾಡಿದರು.
 
 
ಬಹಳಷ್ಟು ದೇವಾಲಯಗಳು ಸರಿಯಾದ ವ್ಯವಸ್ಥೆಯಿಲ್ಲದೆ ಸೊರಗುತ್ತಿವೆ. ಅವುಗಳ ಮೂಲ ಕಲಾಕೃತಿಗೆ ಧಕ್ಕೆಯಾಗದಂತೆ ಸಂರಕ್ಷಣೆ ಮಾಡಬೇಕಿದೆ. ಪುನರ್ನವೀಕರಣ ಮಾಡಿದರೂ ಮೂಲಕ್ಕೆ ಕಲೆಗೆ ಚ್ಯುತಿ ಬಾರದಂತೆ ಪ್ರತಿಷ್ಠಾಪಿಸಬೇಕಿದೆಎಂದು ಸಲಹೆ ನೀಡಿದರು.
 
 
ಅಳಿವಿನಂಚಿನಲ್ಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆಯಅಗತ್ಯತೆಯನ್ನು ಮನಗಂಡು, ಅವುಗಳನ್ನು ಮೂಲದಂತೆಯೇ ಪ್ರತಿಷ್ಠಾಪಿಸುವ ಸಂಕಲ್ಪದಿಂದ ಶ್ರೀ ಮಂಜುನಾಥಧರ್ಮೋತ್ಥಾನ ಟ್ರಸ್ಟ್ ಸ್ಥಾಪಿಸಲಾಗಿದೆ. ದೇಗುಲಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಹವ್ಯಾಸಿ ವೀಕ್ಷಣ ಬಳಗವು ಈ ಕಾರ್ಯದಲ್ಲಿ ತೊಡಗಿಕೊಂಡರೆ ಟ್ರಸ್ಟ್ನಿಂದ ಪೂರ್ಣ ಸಹಕಾರವಿದೆ ಎಂದು ಹೇಳಿದರು.
 
 
ದೇವಾಲಯಗಳು ಧರ್ಮ, ಅರ್ಥ, ಕಾಮ, ಮೋಕ್ಷದ ಪ್ರತೀಕ.ದೇವಾಲಯವೆಂದರೆ ಸ್ಮೃತಿ, ವೇದ, ಶಾಸ್ತ್ರ, ಪುರಾಣಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಮಾಧ್ಯಮ.ಕಳೆದ ಹದಿನೈದು ವರ್ಷಗಳಿಂದ ಒಂದು ಆಶ್ಚರ್ಯಕರ ವಿಷಯ ಕಂಡುಬರುತ್ತಿದೆ. 250, 300 ವರ್ಷಗಳಿಂದ ಪಾಳುಬಿದ್ದಿರುವ ಗುಡಿಗಳು ಈಗ ಜೀರ್ಣೋದ್ಧಾರವಾಗುತ್ತಿವೆ. ಭಕ್ತರು ಅವುಗಳ ರಕ್ಷಣೆಗೆ ಮುಂದಾಗುತ್ತಿರುವುದು ಸಂತೋಷದಾಯಕ ವಿಚಾರ ಎಂದು ಶ್ಲಾಘಿಸಿದರು.
 
 
 
ಬಳಗದ ಅಧ್ಯಕ್ಷ ಗಣಪತಿ ಎಂ.ಭಟ್ಟಅವರು ಮಾತನಾಡಿಚಕ್ರಪಾಣಿ ಮತ್ತು ಬಳಗದ ಪ್ರವಾಸದ ಹಾದಿಯನ್ನು ವಿವರಿಸಿದರು. ಲೇಖಕ ಚಿಂತಾಮಣಿ ಕೂಡ್ಲೆಕೆರೆ `ದೇಗುಲಗಳ ದಾರಿ’ ಕೃತಿ ಪರಿಚಯಿಸಿದರೆ, ದೇಗುಲಗಳ ದಾರಿಯ ಸಂಪಾದರಲ್ಲಿ ಒಬ್ಬರಾದ ಟಿ.ಎಸ್.ಗೋಪಾಲ್ `ಗುಡಿಗೋಪುರಗಳ ಸುತ್ತಮುತ್ತ’ ಕೃತಿ ಕುರಿತು ವಿವರಿಸಿದರು.
 
 
ಕಾರ್ಯಕ್ರಮದಲ್ಲಿ ಬಳಗದ ಖಜಾಂಜಿಚಂದ್ರಪ್ಪ, ಕಾರ್ಯದರ್ಶಿ ಮತ್ತು ಲೇಖಕ ಕೆಂಗೇರಿಚಂದ್ರಪಾಣಿ, ಎಸ್ಡಿಎಂಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ, ಗೋರಿಪುರಚಂದ್ರುಇದ್ದರು. ಹರಿಶಂಕರ್ ತಾಳ್ಯ ಕಾರ್ಯಕ್ರಮ ನಿರೂಪಿಸಿದರು.
 
 
 
 

LEAVE A REPLY

Please enter your comment!
Please enter your name here