ಪ್ರಸಿದ್ಧಿ-ಸಿದ್ಧಿ-ಬುದ್ಧಿ

0
630

ಮಸೂರ ಅಂಕಣ: ಆರ್ ಎಂ ಶರ್ಮ
ಪ್ರಸಿದ್ಧಿ ಯಾರಿಗೆ ಬೇಡಾ?
ಸಿದ್ಧಿ ಕಷ್ಟ-ಇದು ಪರಾತ್ಪರದ ಮಾತು.
ಇದನ್ನು ಅಲ್ಲಗಳೆಯಲಾಗದು-ಆಗಬಾರದು.
ಕೋಟಿ ಪ್ರಯತ್ನ-ಪ್ರಯತ್ನಶೀಲರು -ಒಂದು ಸಂಖ್ಯೆಯಲ್ಲಿ ಸಾಧ್ಯ ಇದು ಭಗವಂತನ ಮಾತು ಭಗವದ್ಸ್ಗೀತೆಯಲ್ಲಿ ಅಜು೯ನನಿಗೆ ಪರಮಾತ್ಮ ಸ್ವತಃ ತಿಳಿಸಿದ ಪರಮ ಸತ್ಯ-ಸಿದ್ಧಿಸಲು-ಸಾಧಿಸಲು-ಸಾಧ್ಯವಾಗಲು-ಸಿಂಧುವಾಗಲು.
ಇನ್ನೂ ಮುಂದಕ್ಕೆ ಹೋಗೋಣ-
ಸಂಸ್ಕೃತದ ಮಾತು-“ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ”-
ಇದರ ತತ್ಪಯ೯-ಹೇಗಾದರೂ ಮಾಡಿ-ಮಾಡಿಸಿ ಪ್ರಸಿದ್ಧರಾಗುವುದು.
ಹೇಗಾದರೂ ಎಂದರೆ-ಎಲ್ಲಾ ಸಂಭವನೀಯಗಳನ್ನೂ ಬಳಸಿ ಕಾಯ೯ಮುಗಿಸುವುದು.
ಪ್ರಸಿದ್ಧಿಗೆ ಈ ದುಂಬಾಲು-ಅಂಬೆಗಾಲು-ಹಂಗು.
ಪ್ರಸಿದ್ಧಿ-ಭೂಮಿಯ ಜೀವನಕ್ಕೇ ಮೀಸಲು.
ಆಮುಷ್ಮಿಕಕ್ಕೆ ಬೇಕು ಸಿದ್ಧಿ.
ಹಾಗಾಗಿ ಸಿದ್ಧಿಗೆ ಭೂಮಿಗೂ-ಭೂಮಿಗೆ ಮೀರಿದ ಗುರುವಾಣಿಯೇ ಗೌರವವಾಣಿ-ಸವಾ೯ಣಿ -ಕುರುವಾಣಿ ಕೂಡಾ.
ಜಯ ಯಶಸ್ಸು ಸಂಪತ್ತು ಇತ್ಯಾದಿ ಭೂಮಿ ಸಂಗತಿಗಳು-ಸಂಗಾತಿಗಳು ಕೈವಲ್ಯಕ್ಕೆ ದೌಬ೯ಲ್ಯ-ಹಾಗಾಗಿ ಆ ಮಾಗ೯ಕ್ಕೆ ಇವನ್ನೆಲ್ಲಾ ಇಲ್ಲೇ ಬಿಡಬೇಕು ಇಲ್ಲದಿದ್ದರೆ ಬಿಡುಗಡೆ ಇಲ್ಲ.
ನಿಜಕ್ಕೂ ಜೀವನದ ಸಾಧನೆ-ಧೋರಣೆ-ಗಮನ ಪರಾತ್ಪರದಲ್ಲಿ ಅನುರಣಿಸಬೇಕಾದರೆ-ಅನುಸರಿಸಬೇಕಾದ ಒಂದೇ ಮಾಗ೯-ಪರಾತ್ಪರದಲ್ಲಿ ಸೋಲುವುದು-ಪರಾತ್ಪರದಲ್ಲಿ ಸೇರುವುದು.
ಹಾಗಾದರೆ ಪ್ರಸಿದ್ಧಿ ಬೇಕೇ-ಬುದ್ಧಿಬೇಕೇ?
ಸತ್ಯಾತ್ ಸತ್ಯದ ಮಾತು ಇವೆರಡೂ ಅಲ್ಲ.
ಅಂದರೆ ಇದಕ್ಕೂ ಹೊರತಾದ ಹುರುಪಾದ-ಹೊಳಪಾದ ಪ್ರತಿಪಾದನೆ ಇದೆಯೇ?
ಅದೇಈ ಪ್ರಸ್ತುತಿಯ ಮೂಲಾಧಾರ.
ಪರಮಾತ್ಮನ ಉತ್ತರ-
“ಮನುಷ್ಯಾಣಾಂ ಕಶ್ಚಿತ್ ಯತತಿ ಸಿದ್ಧಯೇ
ಯತತಾಂಅಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ವತಃ.”
ಇದೇ ಈ ಚಿಂತನದ ಸಾಂದ್ರ ಸಂಗತಿ.
ಇಲ್ಲಿ ಛಿದ್ರ ಸಲ್ಲ ಇದೇ ಬಲ್ಲವರ-ಬಲದವರ ಮಾತು.
ಇದು ಏಕೆ ಈಗ ಅಂದರೆ ಇಲ್ಲಿದೆ ಉತ್ತರ.
ಶತಮಾನಗಳದಿಂದಲೂ ಪ್ರಚಲಿತ ಕಥೆ-
ಶಾಸ್ತ್ರವೇ ಎಲ್ಲಾ ಆಚಾರಕ್ಕೂ ಮಾಗ೯ದಶಿ೯.
ಅದಕ್ಕೇ ಪರಮಾತ್ಮನ ಮಾತು-“ಶಾಸ್ತ್ರಮುತ್ಸಜ್ಯ——–”
ಶಾಸ್ತ್ರವಿನಾ ಯಾವ ಕಾಯಕವೂ ಊಜಿ೯ತವಾಗದು.
ಕನ್ನಡದ ಗಾದೆ-“ಆಚಾರ ಅರಸುತನ ನೀಡುತ್ತದೆ”-
ಅರಸುತನಕ್ಕೆ ಅಥ೯ ರಾಜ ಆಗಬೇಕಂತಲೇ ಅಲ್ಲ-ಸತ್ಯವಾಗಿಯೂ-ಅರಸುತನದ ತಾತ್ಪಯ೯-ಪ್ರಭುತ್ವ-ಎಂದರೆ ಎಲ್ಲಾ ವ್ಯವಹಾರ-ಕಾಯಕ ಇವೆಲ್ಲದರಮೇಲೆ ಪ್ರಭುತ್ವ-ಅಂಕೆ-ಶಾಸನ.
ನಾವೀಗೀಗ ನಿತ್ಯ ಎಂಬಂತೆ ಒಂದು ಮಹಾನ್ ಸುದ್ದಿಯನ್ನು ಕೇಳುತ್ತೇವೆ-ನೋಡುತ್ತೇವೆ-ಓದುತ್ತೇವೆ-ಮಾಧ್ಯಮಗಳಲ್ಲಿ-ಸಮೂಹ ಮಾಧ್ಯಮಗಳಲ್ಲಿ.
ದಿನದ ೨೪ ಘಂಟೆಗಳೂ ಅದರದೇ ಪುನರಾವತ೯ನೆ-ಅನೇಕ ವಾಹಿನಿಗಳಲ್ಲಿ- ದೂರದಶ೯ನಗಳಲ್ಲಿ.
ಅದೆಂದರೆ-ಪ್ರಸಿದ್ಧ ದೇವಸ್ಥಾನ-ದೈವಸ್ಥಾನಗಳಲ್ಲಿ-ಮಹಿಳೆಯರಿಗೆ-ಗಭ೯ ಗುಡಿಗೆ ಸಮೀಪದ ವರೆಗೂ ನಡೆದುಕೊಂಡುಹೋಗಿ ಅಲ್ಲಿ ಉಪಸ್ಥಿತ ಇರುವಹಂಬಲ ಅವಕಾಶಗಳಬಗೆಗೆ.
ಇದನ್ನೇ ಇಂಗ್ಲಿಷ್ ನಲ್ಲಿ-ಸಾನ್ಕ್ಟಂ ಸಾನ್ಕ್ಟೋರಿಉಂ-ಪರಮೋತ್ತಮ ಸ್ಥಳ” ಎನ್ನುತ್ತಾರೆ ಅಷ್ಟೇ.
ಆ ಸೌಭಾಗ್ಯಕ್ಕೆ ಸ್ತ್ರೀ ಗುಂಪುಗಳು-ಈ ಭಲೇ ಕೆಲಸದಲ್ಲಿ ಇತ್ಯಾತ್ಮಕವಾಗಿ ಜಯಸಢಿಸುವುದೇ ಅಗಿದೆ-
ಅವುಗಳ್ಲಿ-ಪ್ರವೇಶ ನಿರಾಕರಿಸುತ್ತಿದ್ದ-ನಿರಾಕರಿಸಿದ್ದ-
೧.ಶನಿಶಿಂಗಾಪುರದ ದೇವಸ್ಥಾನ-ಮಹಾರಾಷ್ಟ್ರ,
೨.ಮುಂಬೈ ನಗರದ ಹಾಜಿ ಆಲಿ ದಗಾ೯-ಮಹಾರಾಷ್ಟ್ರ,
೩.ಕೇರಳದ ಅಯ್ಯಪ್ಪನ ಶಬರಿಮಲ ದೇವಸ್ಥಾನ,
ಇಲ್ಲೆಲ್ಲಾ ಸಹಕಾರ-ಅಸಹಕಾರ,ಜೈಕಾರ,ಹುಂಕಾರ,ಅಹಂಕಾರ ಇತ್ಯಾದಿಗಳ ಮೇಳಾಟ-ಮೇಲಾಟ-ಏನೀ ಜಂಜಾಟ-ಜೂಟಾತ?
ಜಂಜಾಟ-ಪ್ರದಶ೯ನಕಾರಿಗಳ-ಅಧಿಕಾರಿಗಳ-ರಕ್ಷಕರ-ಶಿಕ್ಷಿಸುವರ ನಡುವಿನ ಬಿಗಿ-ಬುಗುಮಾನ-ಮಾನ-ಸಮ್ಮಾನ ಇವೇ ಎಲ್ಲಾ ಸಂಪತ್ತು-ಆಪತ್ತು ನಿವಾರಣೆಗೆ.
ಈ ವರೆಗೂ ಶತಮಾನಗಳಿಂದಲೂ ನಡೆದುಕೊಂಡು ಬಂದಿದ್ದ ಹೆಂಗಸರು ಪ್ರವೇಶಿಸಲು ಅವಕಶವಿಲ್ಲದಿದ್ದರೂ ಪರಾತ್ಪರದ ವರಪ್ರದಾನಕ್ಕೆ ಚ್ಯುತಿ ಇರಲಿಲ್ಲ.
ಪ್ರಾಥಿ೯ಸಿ-ಪ್ರವೇಶಕ್ಕೆ ಅವಕಾಶವಿದ್ದವರು ಬೇಡಿದರು ಮನೆ ಮಂದಿಗೆ ನೆಮ್ಮದಿ,ಜಯ,ಎಲ್ಲಾ ಸಂದವು.
ಮನೆಮಂದಿಗೂ ಯಾವ ಅಸಮಾಧಾನವೂ ಇರಲಿಲ್ಲ-ಈಗ್ಯೂ ಇಲ್ಲ.
ಆದರೂ ಬೆರಳೆಣಿಕೆಯ ಪ್ರದಶ೯ನಕರರು,ಸಂಘಟಕರು,ಭಂಜಕರು-ಮೆರೆಯುತ್ತಿದ್ದಾರೆ-ಗತವನ್ನು ಮರೆಯುತ್ತಿದ್ದಾರೆ.
ಇದು ಅಪಹಾಸ್ಯವೇ-ವಿಪಯಾ೯ಸವೆ?
ಇದೇ ಜೀವನದ ಸೊಗಸು-ಬೆಸುಗೆ-ಮಹಿಮೆ.
ಕೋಟಿ ಕೋಟಿ ಸಂಖ್ಯೆಯಲ್ಲಿ ನೆಮ್ಮದಿ ಪಡೆಯುವರ ಗಡಣ ಒಂದಡೆ.
ಅಡ್ಡಿ-ರಡ್ಡು-ವಡ್ಡು-ಸಡ್ಡು ಹೊಡೆಯುವರ ಗುಂಪು ಇನ್ನೊಂದಡೆ-ಇಲ್ಲಿ ಬೆರಳೆಣಿಕೆಯ ಗುಂಪಿನದೇ ಆಭ೯ಟ.
ಯುದ್ಧಕ್ಕೆ-ಜಗಳಕ್ಕೆ-ರಗಳೆಗೆ-ತರಳೆಗೆ-ಬೆಡವೇ ಎರಡು ಪಕ್ಷ?
ಹೊಡೆದಾಟಕ್ಕೆ-ಪರ-ವಿರೋಧ ಇಲ್ಲದಿದ್ದರೆ ಹೇಗೆ?
ಪ್ರವೇಶಕ್ಕೆ ಬಯಸದೇ ನೆಮ್ಮದಿಯಿಂದ ಇರುವವರು-ಪ್ರವೇಶಕ್ಕೆ ಪ್ರದಶ೯ನಕ್ಕೆ ಮುನ್ನುಗ್ಗಿದ-ಮುತ್ತಿದ ಗುಂಪು ಇವೇ ಪ್ರಯುಕ್ತ ಯುದ್ಧದಸದ್ಯೋಜಾತ ಸತ್ಯ.
ಇಲ್ಲಿ ಸಂಗತಿಗೆ ಕಳಶವಿಟ್ಟಂತೆ ನ್ಯಾಯಾಲಯಗಳು-ಉಚ್ಚ-ಉಚ್ಚತಮ ಇವುಗಳ ಮಧ್ಯಪ್ರವೇಶ.
ಪರಾತ್ಪರದ ನ್ಯಾಯಕ್ಕೆ-ಪರಾತ್ಪರವೇ ಸವೋ೯ಪರಿ-ಪರಮೋಚ್ಚನ್ಯಾಯಾಧೀಶ.
ಪ್ರವೇಶಿಸಿದವರಿಗೂ,ಅವರು ನಿವೇದಿಸಿಕೊಂಡ ಅವರ ಮನೆಮಂದಿಗೂ,ಬಯಸಿದವರಿಗೂ ನ್ಯಾಯ-ನೆಮ್ಮದಿ-ಸುಖ-ಸಂತೋಷ ಎಲ್ಲಾ ನೀಡಿದ್ದು-ನೀಡುತ್ತಿರುವುದು ಸತ್ಯವಲ್ಲವೇ?
ಇಲ್ಲೇನಿದೆ ಅಪಸ್ವರ,ಅನುಮಾನ?
ಹಾಗಾದರೆ ಮತ್ತೇಕೆ ಈ ಸ್ತ್ರೀಪ್ರವೇಶದ ಸನ್ನಿ?
ಸನ್ನಿಧಾನ ಇಲ್ಲ ಎಂಬ ಅನುಮಾನವೇ-ಅವಮಾನವೇ?
ಈ ವರೆಗೂ ದಕ್ಕಿದ-ದಕ್ಕಿಸಿಕೊಟ್ಟ ನೆಮ್ಮದಿ ಸಾಲದ್ದಾಯಿತೇ?
ಪುರೋಹಿತ-ಅಚ೯ಕ-ಪ್ರಾಥಿ೯ಸಿ ಪೂಜೆ ಮಾಡಿ ಪ್ರಸಾದ ಕೊಡಿಸಲು ದಕ್ಷ.
ಮನೆಯ-ಪತಿ,ತಂದೆ,ಸಹೋದರ,ಸೋದರಮಾವ,ಮಾವ ಮತ್ತ್ಯಾರೆ ಹಿತೈಷಿ ಒಳ್ಳೆಯದಕ್ಕೆ ಪ್ರಾಥಿ೯ಸಿ ದೈವಸನ್ನಿಧಾನದಿಂದ ಹಿಂತುರಿಗಿದರೆ ಖಾಲಿ ಕೈಯೆ?
ಈ ಸಂಧಿಗ್ಧವೇ ಈಗ ಈ ಸಮಸ್ಯೆಯ ಜೀವಾಳ-ಬಂಡವಾಳ.
ಆದರೆ ಪ್ರಸಿದ್ಧಿಗೆ ಹಾತೊರೆಯುವ ಜನ-ಮನ,ಯುದ್ಧಕ್ಕೆ ಆಜ್ಯ ಹುಯ್ಯುವರ,ಬೇರೆಯವರ ಹೊಡೆದಾಟದಲ್ಲಿ ಸಂತೋಷ ಪಡೆಯುವ ಜನಗಣ-
ಇವೆಲ್ಲ ಗೌಣವೇ? ಗುಣವೇ?
ಶ್ರೀಮದ್ರಾಮಾಯಣ ಪಾರಾಯಣ ಮಾಡುವಾಗ, ಪಾರಾಯಣ ಮಾಡುವವರ ಬಲ ಭಾಗದಲ್ಲಿ ಅನತಿ ದೂರದಲ್ಲಿ ಒಂದು ಮಣೆ ಹಾಕಿರುತ್ತಾರೆ-ಕಾರಣ ಅಲ್ಲಿ ಸ್ವಯಂ ಆಂಜನೇಯನ ಸನ್ನಿಧಾನವಿದೆ ಎಂತ ನಂಬಿಕೆ.
ಮಹಾಭಾರತದ ಪಾರಾಯಣದ ಸಮಯದಲ್ಲಿ-ಅದೇ ರೀತಿಯಲ್ಲಿ ಒಂದು ಖಾಲಿ ಮಣೆಗೆ ಮಹಾಗಣಪತಿ ಮಹಾಭಾರತದ ಬರಹಗಾರ ಅಲ್ಲಿ ಉಪಸ್ಥಿತನಿರುತ್ತಾನೆ ಎಂಬ ಬಲವಾದ ನಂಬಿಕೆ.
ಇಂತಹ ನಂಬಿಕೆ,ನಡವಳಿಕೆ,ಆಚರಣೇ ಅಪವಾದವೆ-ಅವಮಾನವೇ-ಅಲ್ಪವೇ?
ಇವೇ ಸಂಪ್ರದಾಯ ದೈವಸ್ಥಾನಗಳಿಗೆ,ದೈವೋಪಸನೆಗೆ,ಹರಕೆಗಳಿಗೆ,ಬೇಡಿಕೆಗಳಿಗೆ ಸಲ್ಲವೇ-ಸಲ್ಲಬಾರವೇ?
ತಕ೯ ಸರಿ.
ವಿತಕ೯,ಕುತಕ೯ ಹಾದಿತಪ್ಪಿಸುವ ಉಪಾಯಗಳು ಜತೆಗೆ ಅಪಾಯಗಳ ಒಡಲು.
ದೇವಸ್ಥಾನ ಪ್ರವೇಶದ-ಆವೇಶ-ವೇಶ-ಅಲ್ಲಿ ವೀರವೇಶ,ಜತೆಗೆ ದ್ವಂದ್ವದ ಮೀನಾಮೇಷ.
ಆಚಾರಗಳಿಗೆ ಪ್ರತಿರೋಧ-ವಿರೋಧ ಸಾಧುವೇ-ಸಿಂಧುವೇ?
ಸನಾತನಕ್ಕೆ ನಮನ ಇದೇ ಗುಣಮನ-ನಿಜಮನ-ನೇಮ-ನಿಯಮ.
ಓದುಗರು ಆಳವಾಗಿ ಚಿಂತಿಸಿ-ಮಥಿಸಿ-ತೀಮಾ೯ನಕ್ಕೆ ಬರುವುದೇ ಪರಮ ಶ್ರೇಯೋಮಾಗ೯.
ಅದಕ್ಕೆ ಸುಭಾಷಿತದ ಮಾತು-“ಸಂತಃ ಪರೀಕ್ಷತೇ ಅನ್ಯತರಃ”.
ಪ್ರಚಲಿತ ಸುದ್ದಿಗೆ ಬುದ್ಧಿಯಿಂದ ಗುದ್ದಿ-ಗದ್ದುಗೆಗೆ ಏರಿಸಿವುದೇ ಈಗ ಬೇಕಿರುವ ಮದ್ದು.
ನಿಧಾನ ಸಲ್ಲ.
ತೀಮ೯ನವೇ ಎಲ್ಲ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here