ಪ್ರಶ್ನೋತ್ತರ ಕಲಾಪದ ವೇಳೆ ಟೋಲ್ ಗದ್ದಲ

0
440

ಬೆಂಗಳೂರು ಪ್ರತಿನಿಧಿ ವರದಿ
ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದೆ. ಪ್ರಶ್ನೋತ್ತರ ಕಲಾಪದ ವೇಳೆ ಗದ್ದಲ ನಡೆದಿದೆ. ಸದನದ ಬಾವಿಗಿಳಿದು ಜೆಡಿಎಸ್ ಎಂಎಸ್ ಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
 
 
ಟೋಲ್ ಗಳಲ್ಲಿ ಸಿಬ್ಬಂದಿ ಅನುಚಿತ ವರ್ತನೆ ಬಗ್ಗೆ ಜೆಡಿಎಸ್ ನ ಚೌಡರೆಡ್ಡಿ ಪ್ರಸ್ತಾಪಿಸಿದ್ದಾರೆ. ಟೋಲ್ ನಲ್ಲಿ ಶಾಸಕರನ್ನೂ ಬಿಡಲು ಸಿಬ್ಬಂದಿಗಳು ನಿರಾಕರಿಸುತ್ತಾರೆ.  ತುಮಕೂರಿನ ಕ್ಯಾತ್ಸಂದ್ರ ಟೋಲ್ ನಲ್ಲಿ ಆ್ಯಂಬುಲೆನ್ಸ್ ಬಿಡಲಿಲ್ಲ. ಕೊನೆಗೆ ನಾನೇ ಹೋಗಿ ಆ್ಯಂಬುಲೆನ್ಸ್ ಹೋಗಲು ಅನುವು ಮಾಡಿದೆ ಎಂದು ಟೋಲ್ ಸಿಬ್ಬಂದಿ ವರ್ತನೆ ಬಗ್ಗೆ ಎಂಎಲ್ ಸಿ ಚೌಡರೆಡ್ಡಿ ಗರಂ ಆಗಿದ್ದಾರೆ.
 
 
 
ಇದಕ್ಕೆ ಪಿಡಬ್ಲ್ಯುಡಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಉತ್ತರ ನೀಡಿದ್ದಾರೆ. ಈ ಬಗ್ಗೆ ಫೆಬ್ರವರಿ 13ರ ಸಂಜೆ ಸಭೆ ಕರೆದಿದ್ದೇವೆ. ಈ ಸಭೆಯಲ್ಲಿ ಎಲ್ಲಾ ಶಾಸಕರು, ಎಂಎಲ್ ಸಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೂ ಸಹ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
 
 
ಪಿಡಬ್ಲ್ಯುಡಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಉತ್ತರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಬಾರಿಯೂ ಇದೇ ರೀತಿ ಸಭೆ ಕರೆಯುವುದಾಗಿ ಹೇಳುತ್ತೀರಿ. ಆದರೆ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಗರಂ ಆಗಿ ಉತ್ತರಿಸಿದ್ದಾರೆ.
 
 
 
ಬಿಜೆಪಿಯರ ಮಾತಿನ ಮಧ್ಯೆ ಪ್ರವೇಶಿಸಿದ ಎಂಎಲ್ ಸಿ ಟಿ.ಎ ಶರವಣ ರಾಜ್ಯದ ಎಲ್ಲಾ ಟೋಲ್ ಗಳನನ್ಊ ಇದೇ ರೀತಿಯ ಸಮಸ್ಯೆ ಇದೆ ಎಂದಿದ್ದಾರೆ.
 
 
ಸದಸ್ಯರ ವಾಗ್ವಾದಕ್ಕೆ ಸಭಾಪತಿ ಡಿ ಹೆಚ್ ಶಂಕರಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫ.13ರಂದು ಈ ಬಗ್ಗೆ ನೀವೇ ಚರ್ಚೆ ಮಾಡಿಕೊಳ್ಳಿ. ಕಲಾಪದ ಬದಲು ಸಭೆಯಲ್ಲಿ ಚರ್ಚಿಸಿ ಎಂದಿದ್ದಾರೆ.
 
 
ಆದರೆ ಮಹದೇವಪ್ಪ ಉತ್ತರಕ್ಕೆ ತೃಪ್ತರಾಗದ ಜೆಡಿಎಸ್ ಸದಸ್ಯರು, ಸದನದ ಬಾವಿಗಿಳುದು ಪ್ರತಿಭಟನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here