ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ

0
236

 
ಬೆಂಗಳೂರು ಪ್ರತಿನಿಧಿ ವರದಿ
ಎಸ್ ಎಸ್ ಎಲ್ ಸಿ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಎಸ್ ಎಸ್ ಎಲ್ ಸಿ ಬೋರ್ಟ್ ಮಂಡಳಿಯ ನಿರ್ದೇಶಕಿ ಯಶೋಧಾ ಬೋಪಣ್ಣ ಹೇಳಿದ್ದಾರೆ.
ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ ಕೇವಲ ವದಂತಿಯಾಗಿದೆ. 10ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿಲ್ಲ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಪ್ರಶ್ನೆಗಳು ನಿಜವಾದಲ್ಲ. ನಿಜವಾದ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಿಗೆ ತಾಳೆಯಾಗುತ್ತಿಲ್ಲ.
 
ವಾಟ್ಸಪ್ ನತ್ತ ವಿದ್ಯಾರ್ಥಿಗಳು ಗಮನಹರಿಸೋದು ಬೇಡ. ಈಗಾಗಲೇ ಎಲ್ಲಾ ಡಿಡಿಪಿಐಗಳಿಂದ ಮಾಹಿತಿ ಪಡೆದಿದ್ದೇವೆ. ಎಸ್ ಎಸ್ ಎಲ್ ಸಿ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ವದಂತಿ ಅಷ್ಟೇ ಎಂದು ನಿರ್ದೇಶಕಿ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here