ಪ್ರಯೋಗಾಲಯ ಕಾನೂನು ಬದ್ಧವಾಗಿದೆ

0
344

ಬೆಂಗಳೂರು ಪ್ರತಿನಿಧಿ ವರದಿ
ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಖಾಸಗಿ ಸಂಸ್ಥೆ ಪ್ರಾರಂಭಿಸಿರುವ ಪ್ರಯೋಗಾಲಯದ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ತಿಳಿಸಿದರು.
 
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಭೇಟಿಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಯೋಗಾಲಯ ಪ್ರಾರಂಭಿಸುವ ಸಂಬಂಧ ನಾಲ್ಕು ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು. ಅಂತಿಮವಾಗಿ ಕಡಿಮೆ ದರ ನಮೂದು ಮಾಡಿದ ಸಂಸ್ಥೆಗೆ ಟೆಂಡರ್ ನೀಡಲಾಗಿದ್ದು, ಹಾಗಾಗಿ ಪ್ರಯೋಗಾಲಯ ಕಾನೂನು ಬದ್ಧವಾಗಿದೆ. ಈ ರೀತಿಯ ಪ್ರಯೋಗಾಲಯಗಳನ್ನು ಶಿವಮೊಗ್ಗ ಹಾಗೂ ಮೈಸೂರು ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಹಿಂದಿನ ಸರ್ಕಾರ ಅನುಮತಿ ನೀಡಿದೆ ಎಂದರು.
 
 
ನೂತನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿಲ್ಲ ಎಂದರು.

LEAVE A REPLY

Please enter your comment!
Please enter your name here