ಪ್ರಯಾಣಿಕರ ಜೇಬಿಗೆ ಕತ್ತರಿ

0
263

ಬೆಂಗಳೂರು ಪ್ರತಿನಿಧಿ ವರದಿ
ಖಾಸಗಿ ಬಸ್ ಟ್ರಾವೆಲ್ಸ್ ಏಜೆಂಟ್ ಗಳು ಪ್ರಯಾಣಿಕರಿಗೆ ಶಾಕ್ ನೀಡಿದ್ದಾರೆ. ಖಾಸಗಿ ಬಸ್ ಮಾಲೀಕರು ಮನಬಂದಂತೆ ವಸೂಲಿ ಮಾಡುತ್ತಿದ್ದಾರೆ.
 
 
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರಿಗೆ ಡಬ್ಬಲ್ ಚಾರ್ಜ್ ಮಾಡಿದ್ದಾರೆ. ಸಾಮಾನ್ಯ ದಿನಗಳಲ್ಲಿ ಇದ್ದ ದರ ಈಗ ದುಪ್ಪಟ್ಟಾಗಿದೆ. ಹಬ್ಬದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದೀಪಾವಳಿಗೆ ಖಾಸಗಿ ಬಸ್ ಗಳ ದರ ದುಪ್ಪಟ್ಟಾಗಿದೆ.
 
 
 
ಬೆಂಗಳೂರುನಿಂದ ಹುಬ್ಬಳ್ಳಿಗೆ ನಿತ್ಯದ ದರ 700 ರೂ. ಇದ್ದಲ್ಲಿ 1200ರೂ. ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ನಿತ್ಯದ ದರ 550ರೂ. ಇದ್ದಲ್ಲಿ ಈಗ 1200ರೂ.ವಸೂಲಿ ಮಾಡಲಾಗುತ್ತಿದೆ. ಬೆಂಗಳೂರುನಿಂದ ಹೈದರಾಬಾದ್ ಗೆ ನಿತ್ಯದ ದರ 900ರೂ. ಇದ್ದಲ್ಲಿ 2200ರೂ., ಬೆಂಗಳೂರುನಿಂದ ಬೀದರ್ ಗೆ ನಿತ್ಯದ ದರ 1000ರೂ. ಇದ್ದಲ್ಲಿ 2000ರೂ., ಬೆಂಗಳೂರುನಿಂದ ಶಿವಮೊಗ್ಗಗೆ ನಿತ್ಯದ ದರ 700ರೂ.ಇದ್ದಲ್ಲಿ 1100ರೂ., ಬೆಂಗಳೂರುನಿಂದ ಬಿಜಾಪುರಕ್ಕೆ ನಿತ್ಯದ ಬೆಲೆ 850ರೂ. ಇದ್ದಲ್ಲಿ 1495 ರೂ. ವಸೂಲಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here