ಪ್ರಬಲ ಭೂಕಂಪ

0
231

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಜಪಾನ್ ನಲ್ಲಿ ಸೋಮವಾರ ತಡರಾತ್ರಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲಾಗಿದೆ.
 
 
ಭೂಮಿ ಕಂಪಿಸುತ್ತಿದ್ದಂತೆಯೇ ಆತಂಕದಿಂದ ಜನರು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪ್ರಬಲ ಭೂಕಂಪನದಿಂದಾಗಿ ಜಪಾನ್ ನ ಕಾಂಟೋ ಪ್ರಾಂತ್ಯದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ.
 
 
 
ಜಪಾನ್ ಸ್ಥಳೀಯ ಕಾಲಮಾನ ರಾತ್ರಿ 9.23ರ ವೇಳೆಯಲ್ಲಿ ಭೂಮಿ ಸುಮಾರು 5 ಸೆಕೆಂಡ್ ಗಳ ಕಾಲ ಭೂಮಿ ನಡುಗಿದೆ. ಜಪಾನ್ ನ ಕಾಂಟೋ ಪಾಂತ್ಯದ ಇಬರಾಕಿ ಪ್ರದೇಶ ಭೂಕಂಪನದ ಕೇಂದ್ರ ಬಿಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
 
 
ಇಬರಾಕಿಯ ಸುಮಾರು 40 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದ್ದು, ಕಂಪನ ಭೂಮಿ ಆಳದಲ್ಲಿಯಾದ್ದರಿಂದ ಹೆಚ್ಚಿನ ಅನಾಹುತಗಳಾಗಿಲ್ಲ.
ಜಪಾನ್ ನಲ್ಲಿ 2011ರ ಮಾರ್ಚ್ ನಲ್ಲಿ ಪ್ರಬಲ ಭೂಕಂಪನ ಹಾಗೂ ಸುನಾಮಿ ಸಂಭವಿಸಿತ್ತು. ಈ ಭೀಕರ ಘಟನೆಯಲ್ಲಿ ಸುಮಾರು 18,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಲೆಕ್ಕವಿಲ್ಲದ್ದಷ್ಟು ಜನರು ನಾಪತ್ತೆಯಾಗಿದ್ದರು. ಭೂಮಿಯ 4 ಟೊಕ್ಟೋನಿಕ್ ಪ್ಲೇಟನ್ನು ಜಂಕ್ಷನ್ ನಲ್ಲಿ ಜಪಾನ್ ಇರುವುದರಿಂದ ಜಗತ್ತಿನ ಪ್ರಬಲ ಭೂಕಂಪನ ಶೇ.20 ರಷ್ಟು ಭಾಗದ ಭೂಕಂಪನ ಜಪಾನ್ ನಲ್ಲೇ ಸಂಭವಿಸುತ್ತದೆ.

LEAVE A REPLY

Please enter your comment!
Please enter your name here