ಪ್ರಬಲ ಭೂಕಂಪನ

0
342

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಜಪಾನ್ ನ ಪೂರ್ವ ಕರಾವಳಿ ಭಾಗದಲ್ಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಪೂರ್ವ ಜಪಾನ್ ನ ಕಟ್ಸೂರಾ ನಗರದಲ್ಲಿ ಬೆಳಗ್ಗೆ ಸುಮಾರು 9.14ರ ವೇಳೆಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
 
 
ಭೂಕಂಪನ ಬಳಿಕ ಸಂಭವಿಸಿದ ಉಪಕಂಪನ ಕೂಡ ಪ್ರಬಲವಾಗಿದ್ದು, 6.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಜಪಾನ್ ಹವಮಾನ ಇಲಾಖೆ ಹೇಳಿದೆ. ಭೂಕಂಪನದಿಂದ ಸಾವು-ನೋವಿನ ಕುರಿತು ಯಾವುದೇ ರೀತಿಯ ವರದಿಗಳು ಬಂದಿಲ್ಲ.

LEAVE A REPLY

Please enter your comment!
Please enter your name here