ಪ್ರಪಾತಕ್ಕೆ ಉರುಳಿದ ಬಸ್

0
232

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬಸ್‌ ಪ್ರಪಾತಕ್ಕೆ ಉರುಳಿದ ಪರಿಣಾಮ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದ ಘಟನೆ ಅಸ್ಸಾಂ-ಮೇಘಾಲಯದ ಸೋನಾಪುರದ ಪೂರ್ವ ಕಾಶಿ ಬಳಿಯ ಬೆಟ್ಟಪ್ರದೇಶದಲ್ಲಿ ಮಂಗಳವಾರ ರಾತ್ರಿ 9.45ರ ಸುಮಾರಿಗೆ ಘಟನೆ ಸಂಭವಿಸಿದೆ.
 
 
 
ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಶಿಲ್ಲಾಂಗ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸು ಸಿಲ್ಚಾರ್‌ನಿಂದ ಅಸ್ಸಾಂನ ಗುವಾಹಟಿಗೆ ಹೋಗುತ್ತಿತ್ತು.
 
 
11 ಮೃತದೇಹಗಳನ್ನು ಅಪಘಾತ ಸ್ಥಳದಿಂದ ಹೊರತೆಗೆಯಲಾಗಿದೆ ಹಾಗೂ ಸ್ಥಳದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here