ಪ್ರಧಾನಿ ಮೋದಿ ವಿರುದ್ಧ ರಾಹುಲ್ ಟೀಕಾಪ್ರಹಾರ

0
402

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತಕ್ಕೆ ನಿಜವಾದ ಅಚ್ಛೇದಿನ್ ಬರುವುದು 2019ರಲ್ಲಿ… ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ ‘ಅಚ್ಛೇದಿನ್’ ಬರುತ್ತದೆ ಎಂದು ಅಖಿಲ ಭಾರತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
 
 
ತಾಲ್ ಕಟೋರ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಹೇಳಿದ ರಾಹುಲ್, ಜನ ಎಂದು ಅಚ್ಛೇದಿನ್ ಬರುತ್ತೆ ಎಂದು ಕಾಯುತ್ತಿದ್ದಾರೆ. ಆದರೆ ಇಂದು ಎಂದಿಗಿಂತ ಹೆಚ್ಚು ನಿರುದ್ಯೋಗ ಸಮಸ್ಯೆ ಬರುತ್ತದೆ. ಯೋಚನೆ ಮಾಡದೇ ನೋಟ್ ಬ್ಯಾನ್ ಮಾಡಿದ್ದಾರೆ. ನೋಟ್ ಬ್ಯಾನ್ ಪರಿಣಾಮಗಳನ್ನು ಯೋಚನೆ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ತೀವ್ರ ಟೀಕಾಪ್ರಹಾರ ಮಾಡಿದ್ದಾರೆ.
 
 
 
ದೇಶ, ವಿದೇಶದ ಯಾವುದೇ ಅರ್ಥಶಾಸ್ತ್ರಜ್ಞರ ಒಪ್ಪಿಗೆ ಇಲ್ಲ. ಯಾವುದೇ ಅರ್ಥಶಾಸ್ತ್ರಜ್ಞರು ಈ ಕ್ರಮ ಸ್ವಾಗತಿಸಲಿಲ್ಲ.ಬಾಬಾ ರಾಮ್ ದೇವ್ ಸರ್ಕಾರದ ಅರ್ಥಶಾಸ್ತ್ರಜ್ಞರಾಗಿದ್ದಾರೆ.ಬಾಬಾ ಅವರು ಹೋಮ್ ಮೇಡ್ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಆದರೆ ಇದೊಂದು ಮಹಾನ್ ಯಜ್ಞ ಅಂತ ಹೇಳುತ್ತಿದ್ದಾರೆ ಎಂದು ಮೋದಿ, ಬಾಬಾ ರಾಮ್ ದೇವ್ ಕುರಿತು ರಾಹುಲ್ ವ್ಯಂಗ್ಯವಾಡಿದ್ದಾರೆ.
 
 
 
ನೋಟ್ ಬ್ಯಾನ್ ಒಂದು ಮೋದಿ ಸರ್ಕಾರದ ವೈಫಲ್ಯತೆಗಳನ್ನು ಮುಚ್ಚಿಕೊಳ್ಳುವ ದೊಡ್ಡ ನೆಪವಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಮೋದಿ ಇಡೀ ದೇಶದ ಜನರ ಕೈಗೆ ಪೊರಕೆ ಕೊಟ್ಟರು. ಯೋಗದ ಹೆಸರಲ್ಲಿ ಜನರನ್ನು ಪದ್ಮಾಸನದಲ್ಲಿ ಕೂರಿಸಿದ್ದರು. ಆದರೆ ಮೋದಿ ಅವರಿಗೇ ಪದ್ಮಾಸನ ಹಾಕಲು ಸಾಧ್ಯವಾಗಿಲ್ಲ. ಸ್ವಚ್ಛತೆ, ಯೋಗದ ಹೆಸರಿನಲ್ಲಿ ಪ್ರಚಾರ ಪಡೆದಿದ್ದೇ ಸಾಧನೆಯಾಗಿದೆ ಎಂದು ರಾಹುಲ್ ಮೋದಿ ಕಾರ್ಯಕ್ರಮಗಳ ಕುರಿತು ವ್ಯಂಗ್ಯವಾಡಿದ್ದಾರೆ.
 
 
 
ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಭಾರಿ ಪ್ರಚಾರ ಮಾಡಿದ್ದಾರೆ. ಆದ್ರೆ ಉತ್ಪಾದನಾ ಕ್ಷೇತ್ರದಲ್ಲಿ ದೇಶ 16 ವರ್ಷ ಹಿಂದಿದೆ. ವಾಹನಗಳ ಮಾರಾಟದಲ್ಲಿ ಶೇ.60ರಷ್ಟು ಇಳಿಕೆಯಾಗಿದೆ.
ನಾವು ನಮ್ಮ ಪಕ್ಷ ವಿವಿಧ ಸಂಸ್ಥೆಗಳನ್ನು ಗೌರವಿಸುತ್ತಿದ್ದೆವು. ನಾವು ಮಾಧ್ಯಮಗಳನ್ನು ಗೌರವಪೂರ್ವಕ ನಡೆಸಿಕೊಳ್ಳುತ್ತಿದ್ದೇವು. ನಾವು ನ್ಯಾಯಾಂಗವನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದೆವು. ಆದ್ರೆ ಪ್ರಧಾನಿ ಮೋದಿ ಸರ್ಕಾರ ಯಾರನ್ನೂ ಗೌರವಿಸುತ್ತಿಲ್ಲ ಎಂದು ರಾಹುಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here