ಪ್ರಧಾನಿ ಮೋದಿ ಭೇಟಿ ಮಾಡಿದ ವಿಶ್ವ ಬ್ಯಾಂಕ್ ಅಧ್ಯಕ್ಷ

0
433

ವರದಿ: ಲೇಖಾ
ವಿಶ್ವ ಬ್ಯಾಂಕ್ ಅಧ್ಯಕ್ಷ ಡಾ.ಜಿಮ್ ಯಂಗ್ ಕಿಮ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ವಿಶ್ವಸಂಸ್ಥೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಏನೆಲ್ಲಾ ಸಾಧ್ಯತೆಗಳಿವೆ ಎನ್ನುವುದರ ಕುರಿತು ಚರ್ಚಿಸಿದ್ದಾರೆ.
 
 
 
 
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಜಿಮ್ ಯಂಗ್ ಕಿಮ್, ಪ್ರಧಾನಿ ಮೋದಿ ಭೇಟಿ ವೇಳೆ ಪೌಷ್ಟಿಕ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಕುರಿತು ಭಾರತದ ಪ್ರಯತ್ನ ಸಹಕಾರ ನೀಡಲು ಇರುವ ಸಾಧ್ಯತೆಯ ಮಾರ್ಗಗಳನ್ನು ಕುರಿತು ಚರ್ಚೆ ನಡೆಸಿದ್ದಾರೆ.
 
 
 
ಬಳಿಕ ಮಾತನಾಡಿದ ಜಿಮ್, ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದ್ದು, ಶೇಕಡಾ 26ರಷ್ಟು ವಿಶ್ವದ ಅತ್ಯಂತ ಕಡು ಬಡವರು ಹೊಂದಿರುವ ದೇಶ ಕೂಡ ಹೌದು.ಬಡತನವನ್ನು ಕೊನೆಗಾಣಿಸಲು ಮತ್ತು 2030ರ ವೇಳೆಗೆ ಬಡತನಕ್ಕೆ ಅಂತ್ಯ ಹಾಡಲು ಭಾರತಕ್ಕೆ ಉತ್ತಮ ಅವಕಾಶಗಳಿವೆ ಎಂದರು.
 
 
 
ಪ್ರಧಾನಿ ಮೋದಿಯವರ ಸುಧಾರಣೆಯ ಆಡಳಿತ ತಮಗೆ ಬಹಳ ಇಷ್ಟವಾಗಿದ್ದು, ಸರ್ಕಾರದ ಆದ್ಯತೆಗಳನ್ನು ಈಡೇರಿಸಲು ವಿಶ್ವ ಬ್ಯಾಂಕ್ ಹೇಗೆ ಆರ್ಥಿಕ ಮತ್ತು ಜ್ಞಾನದ ಸಹಕಾರವನ್ನು ನೀಡಬಹುದು ಎಂಬುದನ್ನು ಭೇಟಿ ವೇಳೆ ಅರ್ಥೈಸಿಕೊಂಡೆ ಎಂದು ತಿಳಿಸಿದ್ದಾರೆ.
 
 
 
ಭಾರತದ ಆರ್ಥಿಕತೆ ವಿಶ್ವದಲ್ಲೇ ತ್ವರಿತ ಬೆಳವಣಿಗೆ ದಾಖಲಿಸುತ್ತಿದೆ. ಮೋದಿ ನಾಯಕತ್ವ ಭಾರತದ ಆರ್ಥಿಕತೆ ಪ್ರಗತಿಯಲ್ಲಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here