ಪ್ರಧಾನಿ ಮೋದಿ ದಲಿತ ವಿರೋಧಿ: ಮಾಯಾ

0
519

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿಗೆ ಹರಿದು ಬರುತ್ತಿರುವ ಪಕ್ಷದ ನಿಧಿಯ ಬಗ್ಗೆ ಏಕೆ ಮಾಹಿತಿ ಇಲ್ಲ? ದಲಿತೆ ಎಂಬ ಕಾರಣಕ್ಕೆ ನಮ್ಮ ಮೇಲೆ ದಾಳಿ ನಡೆಯುತ್ತಿದೆ. ಬಿಎಸ್ ಪಿ ಕಾನೂನಿನ ಪ್ರಕಾರವೇ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಲಖನೌದಲ್ಲಿ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
 
 
ನಾವು ಅಧಿಕಾರ ಹಿಡಿಯುವುದು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ನನ್ನ ಸೋದರನ ಮೇಲೂ ಐಟಿ ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಜನರು ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ. ಬಿಜೆಪಿ ನಾಯಕರ ಬಳಿ ಸಿಕ್ಕ ದುಡ್ಡಿಗೆಲ್ಲಾ ದಾಖಲೆ ಇದೆಯಾ? ಅವರಿಗೊಂದು ನೀತಿ ನಮಗೊಂದು ನೀತಿ ಎಂಬುದು ಸರಿಯಾ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.
 
 
ಬಿಜೆಪಿಯ ನಿರ್ದೇಶನದಂತೆ ಪಕ್ಷದ ಹೆಸರನ್ನು ಕೆಡಿಸುವ ಹುನ್ನಾರ ನಡೆದಿದೆ. ಬಿಜೆಪಿ ಸೇರಿದಂತೆ ಬೇರೆಪಕ್ಷಗಳು ಹೇಗೆ ಹಣ ಡೆಪಾಸಿಟ್ ಮಾಡಿದೆ ಹಾಗೆ ನಾವು ಮಾಡಿದ್ದೇವೆ. ಬೇರೆ ಪಕ್ಷಗಳ ಪಾರ್ಟಿ ಫಂಡ್ ಬಗ್ಗೆ ಯಾರು ಕೇಳೋದಿಲ್ಲ, ಪ್ರಶ್ನಿಸೋದಿಲ್ಲ.. ಇದೆಲ್ಲಾ ಬಿಜೆಪಿ ದಲಿತ ವಿರೋಧಿ ಮನಸ್ಥಿತಿ ಅಲ್ಲದೇ ಮತ್ತೇನು…? ಎಂದು ಮಾಯಾವತಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
 
 
ಅಲ್ಲದೆ ಈ ಸತ್ಯ ಈಗಾಗ್ಲೇ ಎಲ್ಲರಿಗೂ ಗೊತ್ತಿರುವಂತದ್ದೇ.ದಲಿತ ವಿರೋಧಿ ಮನಸ್ಥಿತಿ ಹೊಂದಿದವರು ನಮ್ಮಂತವರನ್ನು ಸಹಿಸಿಕೊಳ್ಳೋದಿಲ್ಲ. ಒಬ್ಬ ದಲಿತ ನಾಯಕಿ ಕೈಗೆ ಉತ್ತರಪ್ರದೇಶದ ರಾಜಕಾರಣ ಮಾಸ್ಟರ್ ಕೀಲಿ ಸಿಗಬಾರದು ಅನ್ನೋದು ಬಿಜೆಪಿಯ ಉದ್ದೇಶವಾಗಿದೆ. ಬಿಎಸ್ ಪಿ ತನ್ನ ಪಕ್ಷದ ನಿಯಮದ ಅನುಸಾರವಾಗಿಯೇ ಹಣವನ್ನು ಬ್ಯಾಂಕ್ ಗೆ ಜಮೆ ಮಾಡಲಾಗಿದೆ. ಜನರು ಪಕ್ಷಕ್ಕೆ ನೀಡಿದ ಚಂದಾವನ್ನು ನಿಯಮಬದ್ಧವಾಗಿ ಸ್ವೀಕರಿಸಲಾಗಿದೆ. ಅಲ್ಲಿ ಜಮೆ ಆಗಿರೋದು ಪಕ್ಷದ ದುಡ್ಡು, ಅದನ್ನು ನಾವು ಬಿಸಾಕುವುದಕ್ಕೆ ಸಾಧ್ಯನಾ? ಬಿಎಸ್ ಪಿ ಹೆಸರನ್ನು ಕೆಡಿಸುವ ನಿಟ್ಟಿನಲ್ಲಿ ಈ ಆರೋಪ ಮಾಡಲಾಗುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ.
ನೋಟ್‍ಬ್ಯಾನ್ ನಂತರ ಬಿಎಸ್‍ಪಿ ಖಾತೆಯಲ್ಲಿ 104 ಕೋಟಿ ರೂ. ಜಮೆ:
ನೋಟ್ ಬ್ಯಾನ್ ಬಳಿಕ ಬಹುಜನ ಸಮಾಜವಾದಿ ಪಕ್ಷಕ್ಕೆ ಸೇರಿದ ಬ್ಯಾಂಕ್ ಖಾತೆಗೆ 104 ಕೋಟಿ ರೂಪಾಯಿ ಜಮೆ ಆಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿತ್ತು. ಇದರ ಜೊತೆಗೆ ಬಿಎಸ್ಪಿ ನಾಯಕಿ ಮಾಯಾವತಿ ಸಹೋದರನ ಖಾತೆಗೆ 1.43 ಕೋಟಿ ರೂ. ಹಣ ಜಮೆ ಆಗಿರೋದನ್ನು ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಯೂನಿಯನ್ ಬ್ಯಾಂಕಿನ ಶಾಖೆಯೊಂದರಲ್ಲಿ ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿತ್ತು

LEAVE A REPLY

Please enter your comment!
Please enter your name here