ಪ್ರಧಾನಿ ಮೇಲೆ ಡ್ರೋನ್ ದಾಳಿಗೆ ಸಂಚು

0
328

ವರದಿ: ಲೇಖಾ
ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಮೇಲೆ ಡ್ರೋನ್ ದಾಳಿಗೆ ಉಗ್ರರ ಸಂಚು
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಡ್ರೋನ್ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
 
 
ಪ್ರಧಾನಿಯವರ ಉನ್ನತ ಮಟ್ಟದ ಭದ್ರತಾ ಸಮಿತಿಯ ಸಭೆಯಲ್ಲಿ ಗುಪ್ತಚರ ಮೂಲಗಳು ಈ ಮಾಹಿತಿ ಬಹಿರಂಗಪಡಿಸಿವೆ. ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಬೆಂಬಲಿತ ಉಗ್ರ ಸಂಘಟನೆಗಳಾದ ಲಷ್ಕರ್ ಎ ತೋಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ದಾಳಿಗೆ ಸಂಚು ಹೂಡಿವೆ ಎಂದು ತಿಳಿದುಬಂದಿದೆ.
 
 
 
ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಿರುವಾಗ ಪ್ರಧಾನಿ ಮೇಲೆ ದಾಳಿ ನಡೆಸುವುದು ಉಗ್ರರ ಸಂಚಾಗಿದೆ. ದಾಳಿ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬುಲೆಟ್​ಪ್ರೂಫ್ ಗಾಜಿನ ಆವರಣದಲ್ಲಿ ಪ್ರಧಾನಿ ಭಾಷಣ ಆಯೋಜಿಸಲು ಎಸ್​ಪಿಜಿ ಪ್ರಸ್ತಾವನೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here