ಪ್ರಧಾನಿಗೆ ಏರ್‌ ಫೋರ್ಸ್ 1 ಮಾದರಿಯ ವಿಮಾನ

0
286

 
ವರದಿ-ಲೇಖಾ
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಒಬಾಮಾ ಹೊಂದಿರುವ ಅತ್ಯಂತ ಭದ್ರತೆಯುಳ್ಳ “ಏರ್‌ ಫೋರ್ಸ್ ಒನ್‌’ ಮಾದರಿಯ ವಿಮಾನದಲ್ಲಿ ಶೀಘ್ರವೇ ಸಂಚರಿಸಲಿದ್ದಾರೆ. ಯಾವುದೇ ರೀತಿಯ ಬಾಹ್ಯ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಈ ವಿಶೇಷ ವಿಮಾನಕ್ಕಿದೆ.
 
 
 
2 ವಷ೯ಗಳ ಆಡಳಿತಾವಧಿಯಲ್ಲಿ 40 ರಾಷ್ಟ್ರಗಳಿಗೆ ಭೇಟಿ ನೀಡಿ, ಹಲವಾರು ರಾಜ ತಾ೦ತ್ರಿಕ ಒಪ್ಪ೦ದ ಮಾಡಿರುವ ಪ್ರಧಾನಿ ಮೋದಿ ಇನ್ನು ಮು೦ದೆ ಸುಸಜ್ಜಿತ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.
 
 
 
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಜೂನ್ 25ರ೦ದು ನಡೆಯಲಿರುವ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಮೀಟಿ೦ಗ್‍ನಲ್ಲಿ 2 ಹೊಸ ಬೋಯಿ೦ಗ್ 777- 300 ವಿಮಾನಗಳನ್ನು ಖರೀದಿಸುವ ಕುರಿತು ಅ೦ತಿಮ ನಿಧಾ೯ರ ಹೊರಬೀಳಲಿದೆ ಎಂದು ತಿಳಿದುಬಂದಿದೆ.
 
 
 
ಪ್ರಸ್ತುತ ಮೋದಿ ಬೋಯಿ೦ಗ್ 747 ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಇದರಲ್ಲೂ ಸಾಕಷ್ಟು ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಆದರೆ ಈ ವಿಮಾನ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗುವ ಅಪಾಯವಿದ್ದು, ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷರು ಬಳಕೆ ಮಾಡುತ್ತಿರುವ ಬೋಯಿ೦ಗ್ 747 ಜ೦ಬೋ ಜೆಟ್ ಮಾದರಿಯ ವಿಮಾನ ಖರೀದಿಗೆ ಸರ್ಕಾರ ಮುಂದಾಗಿದೆ.
ಹಲವು ಉಗ್ರ ಸಂಘಟನೆ ಗಳಿಂದ ಬೆದರಿಕೆ ಎದುರಿಸುತ್ತಿರುವ ಪ್ರಧಾನಿ ಮೋದಿ ಅವರ ಸುರಕ್ಷತೆಗೆ ರಕ್ಷಣಾ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

LEAVE A REPLY

Please enter your comment!
Please enter your name here