ಪ್ರತ್ಯೇಕ ವ್ಯವಸ್ಥೆಗಳು

0
314

ಶಿಕ್ಷಣ ಚಿಂತನೆ ಅಂಕಣ: ಅರವಿಂದ ಚೊಕ್ಕಾಡಿ
ಕಾರ್ಯಕ್ರಮ ಸಂ‍ಘಟನೆ: ಮುಂದುವರಿದ ಭಾಗ..
ಇಂದು ಕಾರ್ಯಕ್ರಮದಲ್ಲಿ ಕೆಲವೊಂದು ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿರುತ್ತದೆ. ಆದರೆ ಅದು ‘ಗಣ್ಯ’ ಎಂಬ ಹೆಸರಿನಲ್ಲಿ ಮಾಡುವ ಮೇಲು-ಕೀಳು ವ್ಯವಸ್ಥೆಯಾಗಿರಬಾರದು. ಅವಶ್ಯಕತೆಗೆ ತಕ್ಕಂತೆ ಆ ವ್ಯವಸ್ಥೆಯನ್ನು ಮಾಡಿರಬೇಕು. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಿ:
 
* ಸಭೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸಿದ್ದರೆ ಅವರಿಗೆ ಪ್ರತ್ಯೇಕ ಸ್ಥಾನವನ್ನು ಕಲ್ಪಿಸಬೇಕು. ಪ್ರಜಾಪ್ರಭುತ್ವ ಇದೊಂದು ಅಗತ್ಯವಾಗಿರುತ್ತದೆ.
 
* ಮಾಧ್ಯಮದ ಪ್ರತಿನಿಧಿಗಳು ಕಾರ್ಯಕ್ರಮದ ಎಲ್ಲ ಸೂಕ್ಷ್ಮಗಳನ್ನು ತಿಳಿದುಕೊಳ್ಳಬೇಕಾಗಿರುವುದರಿಂದ ಅವರಿಗೆ ಕಾರ್ಯಕ್ರಮವು ಸರಿಯಾಗಿ ಕಾಣುವಂತೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಬೇಕು.
 
* ಕಾರ್ಯಕ್ರಮಕ್ಕೆ ಯಾರಾದರೂ ಪ್ರಾಯೋಜಕರಿದ್ದರೆ ಅವರನ್ನು ವಿಶೇಷವಾಗಿ ಗುರುತಿಸುವ ದೃಷ್ಠಿಯಿಂದ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಬೇಕು.
 
* ನಿರ್ದಿಷ್ಟ ಸಂಘಟನೆಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಗಳು ಇರಬಹುದು. ಉದಾಹರಣೆಗೆ ಒಂದು ಸಂಘಟನೆಯ ಸ್ಥಾಪಕರು ಅಥವಾ ಆ ಸಂದರ್ಭದ ಕಾರ್ಯಕ್ರಮಕ್ಕೆ ಸಂಬಂಧಸಿದಂತೆ ವಿಶೇಷ ವ್ಯಕ್ತಿಗಳು ಇರಬಹುದು. ಉದಾಹರಣೆಗೆ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರು, ಈ ರೀತಿ ವಿಶೇಷ ಮಹತ್ವ ಪಡೆದವರು ಇದ್ದರೆ ಅವರಿಗೆ ಪ್ರತ್ಯೇಕವಾಗದ ಆಸನ ವ್ಯವಸ್ಥೆಯನ್ನು ಮಾಡಬೇಕು.
 
* ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಕಾರ್ಯಕ್ರಮದಲ್ಲಿ ಏನಾದರೊಂದು ಪಾತ್ರವನ್ನು ನಿರ್ವಹಿಸುವವರು ತಕ್ಷಣ ವೇದಿಕೆಗೆ ಹೋಗಬೇಕಾದ ಅಗತ್ಯವಿರುತ್ತದೆ. ಇಂತಹರವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
 
* ಅಂಗವಿಕಲರು, ಮಕ್ಕಳು, ವೃದ್ಧರು-ಇಂತರಹವರಿಗೆ ಎಲ್ಲರೊಂದಿಗೆ ಓಡಾಡಲು ಕಷ್ಟವಾಗುತ್ತದೆ. ಇಂತಹವರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
 
ಆದರೆ ಈ ರೀತಿಯ ವ್ಯವಸ್ಥೆಯಬ್ಬಯ ಮಾಡುವಾಗ ಆಸನ ಗುಣಮಟ್ಟದಲ್ಲಿ (ಉದಾ: ಕೆಲವರಿಗೆ ಸೋಫಾ, ಉಳಿದವರಿಗೆ ಚಯರ್) ವ್ಯತ್ಯಾಸ ಮಾಡಬಾರದು. ಆಸನವನ್ನು ವ್ಯವಸ್ಥೆ ಮಾಡುವುದರಲ್ಲಿ ಮಾತ್ರ ವ್ಯತ್ಯಾಸ ಇರಬೇಕು. ಅದು ಕೇವಲ ಅವಶ್ಯಕತೆಯ ಕಾರಣಕ್ಕಾಗಿಯೇ ಹೊರತು ಯಾರು ಮೇಲು, ಯಾರು ಕೀಳು ಎಂದು ಗುರುರಿಸುವುದಕ್ಕಲ್ಲ.
ಮುಂದುವರಿಯುವುದು…
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here