ಪ್ರತೀ ವರ್ಷ ವೇತನ ಹೆಚ್ಚಿಸಿದ್ದೇವೆ: ಸಿಎಂ

0
490

ಬೆಂಗಳೂರು ಪ್ರತಿನಿಧಿ ವರದಿ
ವಿಧಾನ ಸಭೆಯಲ್ಲಿಂದು ಕನಿಷ್ಠ ವೇತನ ನಿಗದಿಗಾಗಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರದ ಬಗ್ಗೆ ಪ್ರಸ್ತಾಪಿಸಿ, ಅವರ ಬೇಡಿಕೆಗಳನ್ನು ಈಡೇರಿಸುವಂತೆ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ 90 ರಷ್ಟು ಹಾಗೂ ರಾಜ್ಯದಿಂದ 10 ರಷ್ಟು ವೇತನವಾಗಿ ಕೊಡಲಾಗುತ್ತಿತ್ತು, ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಏಕಾಏಕಿ 60-40 ರಂತೆ ನಿಗದಿ ಮಾಡಿದೆ.
 
 
 
ಆದರೂ ರಾಜ್ಯಸರ್ಕಾರ ಪ್ರತಿ ವರ್ಷ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಹೆಚ್ಚಿಸುತ್ತಲೇ ಬಂದಿದೆ. ಹಾಲಿ ರಾಜ್ಯ ಸರ್ಕಾರದಿಂದ 7000 ರೂ ವರೆಗೆ ವೇತನ ನೀಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಅವರ ವೇತನವನ್ನು ಹೆಚ್ಚಿಸುವ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಎಂದರು.

LEAVE A REPLY

Please enter your comment!
Please enter your name here