ಪ್ರತೀ ಮಂಗಳವಾರ ಆಕಾಶವಾಣಿಯಲ್ಲಿ 'ಗಾಂಪಣ್ಣ'

0
300

ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದಲ್ಲಿ ನೂತನವಾಗಿ ಪ್ರಾರಂಭಿಸಿದ ಗಾಂಪಣ್ಣನ ತಿರ್ಗಾಟ ಸರಣಿ ಕಾರ್ಯಕ್ರಮ ಪ್ರತೀ ಮಂಗಳವಾರ ಸಾಯಂಕಾಲ 6.15 ನಿಮಿಷಕ್ಕೆ ಪ್ರಸಾರವಾಗುತ್ತಿದೆ.
 
 
 
ಜ.3 ರಿಂದ ಪ್ರಾರಂಭಗೊಂಡ ಈ ಸರಣಿಯ ಲೇಖಕರು ತುಳು ವಿದ್ವಾಂಸರಾದ ಡಾ.ಗಣೇಶ್ ಅಮೀನ್ ಸಂಕಮಾರ್, ಗಾಂಪಣ್ಣನಾಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ, ಪದ್ದಣ್ಣನಾಗಿ ಪ್ರವೀಣ್ ಅಮ್ಮೆಂಬಳ ಹಾಗೂ ಕಮಲಕ್ಕನಾಗಿ ವಿದ್ಯಾಮಹೇಶ್ ಪಾತ್ರ ನಿರ್ವಹಿಸಿದ್ದಾರೆ.
 
 
ಡಾ.ಸದಾನಂದ ಪೆರ್ಲ ಬರೆದ ‘ಅಣ್ಣನಕುಲೆ, ಅಕ್ಕನಕುಲೆ ಒಂತೆ ಇಂಚಿ ಕೇನ್ಲೆಯೆ… ‘ ಎಂಬ ಶೀರ್ಷಿಕೆ ಗೀತೆಯನ್ನು ಕೃಷ್ಣ ಕಾರಂತ್ ಹಾಡಿದ್ದಾರೆ. ಮೌನೇಶ್ ಕುಮಾರ್ ಛಾವಣಿ, ಭಾರವಿ ಧೇರಾಜೆ ಮತ್ತು ದೇವರಾಜ್ ಸಂಗೀತ ಸಹಕಾರ ನೀಡಿದ್ದು ತಿರುಚ್ಚಿ ಕೆ.ಆರ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಚಲಿತ ವಿದ್ಯಮಾನಗಳಿಗೆ ಗಾಂಪಣ್ಣನ ಮುಗ್ಧ ಪ್ರತಿಕ್ರಿಯೆ ಮತ್ತು ತುಳುನಾಡಿನ ಬದುಕನ್ನು ಅನಾವರಣ ಮಾಡುವ ಈ ಸರಣಿ ಕುರಿತು ಕೇಳುಗರು ತಮ್ಮ ಅಭಿಪ್ರಾಯಗಳನ್ನು ನಿಲಯ ನಿರ್ದೇಶಕರು, ತುಳು ವಿಭಾಗಕ್ಕೆ ಬರೆದು ತಿಳಿಸಬಹುದು.

LEAVE A REPLY

Please enter your comment!
Please enter your name here