ಪ್ರತಿಷ್ಥಾದಿನ ಮಹೋತ್ಸವ

0
219

 
ವರದಿ-ಚಿತ್ರ : ಗೋವಿಂದಬಳ್ಳಮೂಲೆ
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿ ಅವರ ದಿಗ್ದರ್ಶನದಲ್ಲಿ ಪ್ರತಿಷ್ಥಾದಿನ ಮಹೋತ್ಸವವು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
 
 
 
ಆಚಾರ್ಯಾವರಣ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮ, ವಾಸ್ತುಬಲಿ, ಅಸ್ತ್ರಕಲಶ ಪೂಜೆ, ರಾತ್ರಿಪೂಜೆ ಮತ್ತು ಪ್ರತಿಷ್ಥಾ ದಿನದಂದು ಗಣಹೋಮ, ಬಿಂಬ ಶುದ್ಧಿ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ, ಶ್ರೀಭೂತಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಬಟ್ಟಲುಕಾಣಿಕೆ, ಮಂತ್ರಾಕ್ಷತೆ, ರಾತ್ರಿ ಶ್ರೀರಂಗಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಅರವತ್ ಶ್ರೀ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಜರಗಿದವು.
 
 
 
 
ಕರಿಚ್ಚೇರಿ ಗಿರೀಶ್ ಪೊಳಿನ್ನಾಯ ಅವರು ದೇವರಬಲಿಯಲ್ಲಿ ಸಹಕರಿಸಿದರು. ಅನಂತಪದ್ಮನಾಭ ಮಯ್ಯ ಕ್ಷೇತ್ರ ಪೂಜಾದಿಕಾರ್ಯಗಳನ್ನು ನೆರವೇರಿಸಿದರು. ಕ್ಷೇತ್ರ ಮ್ಯಾನಜಿಂಗ್ ಟ್ರಸ್ಟಿ ಯನ್. ಯಸ್. ಬಳ್ಳುಳ್ಳಾಯ ಅವರು ಸೂಕ್ತ ನಿರ್ದೇಶನಗಳನ್ನಿತ್ತರು. ಮೇನೇಜರ್ ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮಾಡಿದರು. ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸೇವಾ ಸಮಿತಿಯ ವಿವಿಧ ಉಪಸಮಿತಿಗಳ ಸಹಕಾರದಲ್ಲಿ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನವಾಯಿತು.

LEAVE A REPLY

Please enter your comment!
Please enter your name here