ಪ್ರತಿಯೊಬ್ಬರು ಪುಸ್ತಕದ ಉಪಯೋಗ ಪಡೆದುಕೊಳ್ಳಬೇಕು

0
472

ಉಜಿರೆ ಪ್ರತಿನಿಧಿ ವರದಿ
ಓದು ಬರಹ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾರ್ಗ ಅದಕ್ಕೆ ಪೋಷಣೆ ನೀಡುವವರು ಅಗತ್ಯ, ಸತೀಶ್ರವರು ಈ ಮಾರ್ಗದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಪುಸ್ತಕಗಳನ್ನು ವಿದ್ಯಾಸಂಸ್ಥೆಗಳಿಗೆ ಶುಲ್ಕರಹಿತವಾಗಿ ನೀಡಿ ಓದುವವರಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಉಜಿರೆ ಶ್ರೀ.ಧ.ಮಂ.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ದಿನೇಶ್ ಚೌಟ ಮಾತಾನಾಡಿದರು.
 
ಇವರು ಇತ್ತೀಚೆಗೆ ಉಜಿರೆ ಶ್ರೀ.ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ಪ್ರಕಾಶ್ ಸಾಹಿತ್ಯ ವತಿಯಿಂದ ನಡೆದ ಪುಸ್ತಕ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡುತ್ತಿದ್ದರು.
 
ಪುಸ್ತಕ ವಿತರಣಾ ಕಾರ್ಯ ಹಲವು ವರ್ಷಳಿಂದ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಉಪಯೋಗಿಸಲೆಂದು ಲೈಬ್ರರಿಯಲ್ಲಿ ಬುಕ್ ಬ್ಯಾಂಕ್ ಮಾಡುವ ಆಲೋಚನೆ ಹೊಂದಿದ್ದೇವೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಾಗ ಈ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
 
ಪ್ರತಿಯೊಬ್ಬರು ವಿದ್ಯಾಭ್ಯಾಸ ಪಡೆಯಬೇಕು ಹಾಗೂ ನೀವೂ ಮುಂದೆ ಈ ರೀತಿಯ ಒಂದು ಸೇವೆಯನ್ನು ಸಮಾಜಕ್ಕೆ ನೀಡುವಂತಾಗಲಿ ಹಾಗೇ ದೇವರು ನನ್ನ ಈ ಕಾರ್ಯಕ್ಕೆ ಆಶೀರ್ವಾದ ನೀಡಲಿ ಎಂದು ಕಾರ್ಯಕ್ರಮದ ಅತಿಥಿ ಸತೀಶ್ ಅಭಿಪ್ರಾಯ ತಿಳಿಸಿದರು.
 
ಪ್ರತಿ ಪುಸ್ತಕಗಳು ಉತ್ತಮವಾಗಿವೆ ಹಣದ ಬಲ ಇದ್ದರು ಎಲ್ಲರಿಗೂ ಕೊಡೊ ಮನಸ್ಸಿರುವುದಿಲ್ಲ. ಆದರೆ ಸತೀಶ್ರವರು ಹಲವು ವರ್ಷಗಳಿಂದ ಅತೀ ಹೆಚ್ಚು ಪುಸ್ತಕಗಳನ್ನು ನೀಡುತ್ತಾ ಬಂದಿದ್ದಾರೆ ಇದು ಅವರ ದೊಡ್ಡ ಗುಣ ಎಂದು ರೋಟರಿ ಕ್ಲಬ್ನ ಅಧ್ಯಕ್ಷ ಡಿ.ಎಂ.ಗೌಡ ಪ್ರಾಸ್ತಾಪಿಸಿದರು.
 
ಸಮಾರಂಭದಲ್ಲಿ ಸತೀಶ್ ದಂಪತಿಯನ್ನು ಸನ್ಮಾನಿಸಿ ಮತ್ತು 2015-2016 ರ ಸಾಲಿನಲ್ಲಿ ಉತ್ತಮ ಅಂಕ ಪಡೆದವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ.ಧ.ಮಂ.ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಪ್ರಭು ಸ್ವಾಗತಿಸಿದರು. ದೀಕ ನಿರ್ವಹಿಸಿದರು. ಸ್ವಾತಿ ವಂದಿಸಿದರು.

LEAVE A REPLY

Please enter your comment!
Please enter your name here