ಪ್ರತಿಭಾ ದಿನಾಚರಣೆ

0
138

ವರದಿ: ಸುನೀಲ್ ಬೇಕಲ್
ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 2016-17ನೇ ಶೈಕ್ಷಣಿಕ ವರ್ಷದ ಪ್ರತಿಭಾ ದಿನಾಚರಣೆಯು ಡಿಸೆಂಬರ್ 24ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು.
 
 
ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ ಎಂ.ವಿ. ಉಪಸ್ಥಿತರಿದ್ದರು.
 
ಪುಟಾಣಿಗಳ ನೃತ್ಯದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ನೃತ್ಯಪ್ರಕಾರಗಳು ವಿವಿಧ ಭಾಷೆಗಳಲ್ಲಿ ಮೂಡಿ ಬಂದವು. ಅಂತೆಯೇ ವಿವಿಧಜಾಹಿರಾತುಗಳು ಮತ್ತು ಸಮೂಹಗೀತೆಗಳು ಅಗಾಗ್ಗೆ ಬಿತ್ತರಗೊಂಡು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು.
 
ಕಾರ್ಯಕ್ರಮದಲ್ಲಿ ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರದ್ಧಾ , ಸೋಮಶೇಖರ್, ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯಕ್ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಶ್ರದ್ಧಾಯವರು ಮತ್ತು ಶಲಿಕಾ ಶಾಲಾ ವಾರ್ಷಿಕ ಸಂಚಿಕೆಗಳಾದ ಕನಸು ಮತ್ತು ಟ್ಯಾಲೆಂಟ್ ಬಿಡುಗಡೆಗೊಳಿಸಿದರು.
 
 
 
ಅನ್ವಿತಾ ಮತ್ತು ಆದಿತ್ಯ ನಿರೂಪಿಸಲ್ಪಟ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನಿಕೇತನ್, ದಿವಿತ್ ದರ್ಶನ್ , ಸ್ವಾತಿ, ಪೂರ್ಣಿಮಾ ಮತ್ತು ಶಾಲಾ ನಾಯಕ ಗೌತಮ್ ಶಾಲಾ ವಾರ್ಷಿಕ ವರದಿಯನ್ನು ಹಂತ-ಹಂತವಾಗಿವಾಚಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ 10ನೇತರಗತಿಯಲ್ಲಿ ಉನ್ನತದರ್ಜೆ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಹಶಿಕ್ಷಕಿ ಆಶಾ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here