ಪ್ರತಿಭಟನೆ

0
309

ವರದಿ: ಮುನೀರ್ ಕಾಟಿಪಳ್ಳ
MRPL ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕಂಪೆನಿ ಮತ್ತು ಪಾಲಿಕೆಯ ಮಧ್ಯೆ ರಸ್ತೆ ನಿರ್ವಹಣೆ ಕುರಿತು ಹೆಚ್ಚುತ್ತಿರುವ ತಿಕ್ಕಾಟ – ವಿವಾದದ ನಡುವೆಯೇ ಗುರುವಾರ “ನಾಗರಿಕಹೋರಾಟ ಸಮಿತಿ; ಕಾನ, ಸುರತ್ಕಲ್ ” ಸುರತ್ಕಲ್’ನಿಂದ ಎಮ್ ಆರ್ ಪಿ ಎಲ್ ಪ್ರಧಾನ ದ್ವಾರದವರಗೆ ಪಾದಯಾತ್ರೆ ನಡೆಯಿತು.
 
 
 
ಎಮ್ ಅರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಂಪೆನಿ ಮತ್ತು ಜನಪ್ರತಿನಿಧಿಗಳ ವಿರುದ್ದ ವಾಗ್ದಾಳಿ ನಡೆಸಿದರು. “Mrpl ಕಂಪೆನಿಯುರಸ್ತೆ ದುರಸ್ತಿಗೊಳಿಸದಿದ್ದಲ್ಲಿ ತಾನು ಮತ್ತು ಇಡೀ ಪಾಲಿಕೆ ಸಾರ್ವಜನಿಕರೊಂದಿಗೆ ಸೇರಿ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ” ಎಂಬ ಮಾತನ್ನು ಉಲ್ಲೇಖಿಸಿದ ಮುನೀರ್ ಕಾಟಿಪಳ್ಳ, “ಮೇಯರ್ ಮತ್ತು ಜನಪ್ರತಿನಿಧಿಗಳನ್ನು ಆಯ್ಕೆಮಾಡಿ ಕಳುಹಿಸಿರುವುದು ಅಧಿಕಾರ ನಡೆಸಲು, ಪ್ರತಿಭಟನೆ ಮಾಡಲಲ್ಲ. ಪಾಲಿಕೆ ಸೇರಿದಂತೆ ಜಿಲ್ಲಾಡಳಿತ ತಮಗಿರುವ ಅಧಿಕಾರ ಬಳಸಿ ಕಂಪೆನಿಗಳನ್ನು ನಿಯಂತ್ರಿಸಬೇಕು. ಅದು ಬಿಟ್ಟು ಪ್ರತಿಭಟನೆ ಮಾಡುವುದಲ್ಲ. ಎಮ್ ಆರ್ ಪಿಎಲ್, ಎಚ್ ಪಿ ಸಿ ಎಲ್, ಬಿ ಎ ಎಸ್ ಎಫ್ ಮುಂತಾದ ಕಂಪೆನಿಗಳಿಂದ ರಸ್ತೆಯನ್ನು ಕಾಪಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಮೇಯರ್ ಹರಿನಾಥ್ ಮೊದಲು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಲಿ. ನಂತರ ಸಾರ್ವಜನಿಕರ ಜೊತೆಹೋರಾಟಕ್ಕೆ ನೇತೃತ್ವ ಕೊಡಲಿ” ಎಂದು ನೇರ ಸವಾಲು ಹಾಕಿದರು. ಇನ್ನು ಹದಿನೈದು ದಿನಗಳಲ್ಲಿ ರಸ್ತೆ ದುರಸ್ತಿಗೊಳ್ಳದಿದ್ದಲ್ಲಿ mrpl ಸುರತ್ಕ್ ರಸ್ತೆ ಸಂಚಾರವನ್ನು ಪೂರ್ಣಪ್ರಮಾಣದಲ್ಲಿ ತಡೆದು ಹೋರಾಟವನ್ನು ತೀವ್ರಗೊಳಿಸುವುದಾಗಿಅವರು ಎಚ್ಚರಿಸಿದರು.
 
 
 
ಪಾದಯಾತ್ರೆ ಸಾಗುವ ಮಾರ್ಗದಲ್ಲಿ BASF, HPCL ಕಂಪೆನಿಗಳ ದ್ವಾರದ ಮುಂಭಾಗ ಒಂದಷ್ಟು ಹೊತ್ತು ನಿಂತು ಘೋಷಣೆಗಳನ್ನು ಹಾಕುವ ಮೂಲಕ ಕಂಪೆನಿಗಳ ವಿರುದ್ದ ಜನರ ಅತೃಪ್ತಿಯನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.ಹೋರಾಟ ಸಮಿತಿಯ ಸಂಚಾಲಕ ಬಿ ಕೆ ಇಮ್ತಿಯಾಜ್, ಸಹ ಸಂಚಾಲಕ ನವೀನ್ ಪೂಜಾರಿ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಸಲೀಂ ಶ್ಯಾಡೋ, ಮೆಹಬೂಬ್ ಕಾನ, ಶ್ರೀನಿವಾಸ ಹೊಸಬೆಟ್ಟು, ಮುಹಮ್ಮದಾಲಿ ಬಾಳ, ಬಿ ಕೆಮಕ್ಸೂದ್, ಅಜ್ಮಾಲ್ ಕಾನ ಸಹಿತ ಸ್ಥಳೀಯ ಹಲವು ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು‌.

LEAVE A REPLY

Please enter your comment!
Please enter your name here