ಪ್ರತಿಭಟನೆ

0
621

ವರದಿ: ಸಂತೋಷ್ ಬಜಾಲ್
ನಿನ್ನೆ ಉಡುಪಿಯ ಕೆಂಜೂರಿನಲ್ಲಿ ದನ ಸಾಗಿಸುತ್ತಿದ್ದವರ ಮೇಲೆ ಬಜರಂಗಿಗಳು ಮಾಡಿದ ಹಲ್ಲೆಯಿಂದ ಪ್ರಾಣ ಕಳೆದುಕೊಂಡಿರುವಂತಹ ಪ್ರವೀಣ್ ಪೂಜಾರಿಯವರ ಹತ್ಯೆಯನ್ನು ಖಂಡಿಸಿ ಹಾಗೂ ಪ್ರವೀಣ್ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ, ಹಾಗೂ ಗೋರಕ್ಷಕರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಇಂದು ನಗರದಲ್ಲಿ DYFI, SFI, DSS ಸಮಾನ ಮನಸ್ಕ ಸಂಘಟನೆಗಳು ಒಟ್ಟು ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
 
 
ಪ್ರೆತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಡಿವೈಎಫ್ಐನ ಜಿಲ್ಲಾಧ್ಯಕ್ಷರಾದ ದಯಾನಂದ ಶೆಟ್ಟಿ, ಡಿಎಸ್ಎಸ್ನ ಜಿಲ್ಲಾ ಮುಖಂಡರಾದ ರಘು ಎಕ್ಕಾರು ಮಾತಾನಾಡಿದರು. ಈ ವೇಳೆ ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್, ವಿದ್ಯಾರ್ಥಿ ಮುಖಂಡರಾದ ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ವಾಸುದೇವ ಉಚ್ಚಿಲ್, ಸಾದಿಕ್ ಕಣ್ಣೂರು, ರಾಕೇಶ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here