ಪ್ರತಿಭಟನೆ

0
554

ಬೆಂಗಳೂರು ಪ್ರತಿನಿಧಿ ವರದಿ
ಕೊಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಆರೋಪಿಸಿ ಪಿಎಫ್ ಐ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ನಿವಾಸದ ಎದುರು ಪ್ರತಿಭಟನೆ ನಡೆದಿದೆ.
 
 
ನ.10ರಂದು ಮೈಸೂರು ಜೈಲಿನಲ್ಲಿ ಮುಸ್ತಾಫ್ ಕಾವೂರು ಹತ್ಯೆ ನಡೆದಿತ್ತು. ಮುಸ್ತಾಫ್ ಕೊಲೆ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
 
 
 
ಅ.25ರಂದು ಆರೋಪಿ ಮುಸ್ತಾಫ್ ನನ್ನು ವಿಚಾರಣೆಗೆ ಕರೆದೊಯ್ಯಲಾಗಿತ್ತು. ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಕೊಲೆ ಕೇಸ್ ನ ಆರೋಪಿ ಮುಸ್ತಾಫ್ ನನ್ನು ಮೈಸೂರು ಜೈಲಿಗೆ ಪೊಲೀಸರು ಕಳುಹಿಸಿದ್ದರು. ನ.10ರಂದು ಮೈಸೂರು ಜೈಲಿನಲ್ಲಿ ಮುಸ್ತಾಫ್ ಹತ್ಯೆ ನಡೆದಿತ್ತು. ಬಜರಂಗದಳದ ಕಿರಣ್ ಶೆಟ್ಟಿ ಕೊಲೆ ಮಾಡಿದ್ದು, ಕಿರಣ್ ಜತೆ ಕಾಣದ ಕೈಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
 
 
ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಮುಸ್ತಾಫ್ ಫೋಟೊ ಹಿಡದು ಮುಸ್ತಾಫ್ ಕುಟುಂಬಸ್ಥರು, ಬೆಂಬಲಿಗರು ಮತ್ತು ಪಿಎಫ್ ಐ ಕಾರ್ಯಕರ್ತರು ಭಾಗಿಯಾಗಿದ್ದಾರೆ.
 
 
ಮುಸ್ತಾಫ್ ಹತ್ಯೆ ಹಿಂದೆ ಸಂಘ ಪರಿವಾರದ ಕೈವಾಡವಿದೆ. ಅಂತ ಮುಖಂಡರನ್ನು ಪತ್ತೆ ಹಚ್ಚಿ ಬಂಧನ ಮಾಡಬೇಕು. ಪ್ರಕರಣದಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಧರಣಿನಿರತರು ಒತ್ತಾಯ ಮಾಡಿದ್ದಾರೆ. ಅಲ್ಲದೆ ಹತ್ಯೆಯಾದ ಮುಸ್ತಾಫ್ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here