ಪ್ರತಿಭಟನಾ ಪ್ರದರ್ಶನ

0
274

ವರದಿ: ಸಂತೋಷ್ ಬಜಾಲ್
ಪಡೀಲು ಬಜಾಲ್ ರೈಲ್ವೆ ಕೆಳಸೇತುವೆ ಮೂಲಕ ಬಜಾಲ್, ಜಲ್ಲಿಗುಡ್ಡೆ, ಫೈಸಲ್ ನಗರ, ವಿಜಯನಗರ, ಅಳಪೆ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಯನ್ನು ಕೂಡಲೇ ಸರಿಪಡಿಸಲು ಒತ್ತಾಯಿಸಿ, ಕೆಳಸೇತುವೆಯ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಇಂಜಿನಿಯರ್ ಗಳನ್ನು ತನಿಖೆಗೆ ಒಳಪಡಿಸಲು ಆಗ್ರಹಿಸಿ ಸೋಮವಾರ ಡಿವೈಎಫ್ಐ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಯಿತು.
 
 
ಪ್ರತಿಭಟನಾ ಪ್ರದರ್ಶನಕ್ಕೂ ಮುಂಚೆ ಪಡೀಲು ಬಜಾಲು ರೈಲ್ವೆ ಕೆಳಸೇತುವೆಯಿಂದ ಮಂಗಳೂರು ಮಹಾನಗರ ಪಾಲಿಕೆಯವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ಸಾಗಿತು.
 
 
ಈ ಸಂದರ್ಭದಲ್ಲಿ ಡಿವೈಎಫ್ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಹಿರಿಯ ಮುಖಂಡರಾದ ಬಿ.ಎಂ. ಮಾಧವ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಜಿಲ್ಲಾ ಉಪಾದ್ಯಕ್ಷರಾದ ಬಿ.ಕೆ.ಇಮ್ತಿಯಾಜ್, ಸಾದಿಕ್ ಕಣ್ಣೂರು, ಪ್ರೇಮ್ ನಾಥ್ ಜಲ್ಲಿಗುಡ್ಡೆ, ಬಶೀರ್ ಜಲ್ಲಿಗುಡ್ಡೆ, ಸುರೇಶ್ ಬಜಾಲ್, ಅನ್ಸಾರ್, ಶಾಂತ, ರೋಹಿಣಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here