ಪ್ರತಿಪಕ್ಷಗಳಿಗೆ ಪ್ರಧಾನಿ ಟಾಂಗ್

0
159

ರಾಷ್ಟ್ರೀಯ ಪ್ರತಿನಿಧಿ ವರದಿ
ನೋಟ್ ಬ್ಯಾನ್ ವಿಚಾರ ಇಂದು ಪ್ರಮುಖ ಚರ್ಚಾ ವಿಚಾರವಾಗಿದೆ. ಆದರೆ ಸಂಸತ್ ನಲ್ಲಿ ಉತ್ತರ ನೀಡಲು ವಿಪಕ್ಷಗಳು ಬಿಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
 
 
ಗುಜರಾತ್ ನ ಬನ್ಸಕಂತ್ ಜಿಲ್ಲೆ ದೀಸಾ ನಗರದಲ್ಲಿ ಅಮೂಲ್ ಘಟಕಕ್ಕೆ ಚಾಲನೆ ನೀಡಿ, ಮಾತನಾಡಿದ ಪ್ರಧಾನಿ ಸದನದಲ್ಲಿ ನಾನು ಉತ್ತರ ನೀಡಲು ಅವಕಾಶವೇ ಸಿಗುತ್ತಿಲ್ಲ. ವಿನಾಕಾರಣ ಸಂಸತ್ ಕಲಾಪವನ್ನು ಹಾಳುಮಾಡುತ್ತಿದ್ದಾರೆ. ಹೀಗಾಗಿ ಜನರೆದುರೇ ನಾನು ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
 
 
 
ಸಂಸತ್ ಕಲಾಪ ನಡೆಯದಿದ್ದಕ್ಕೆ ರಾಷ್ಟ್ರಪತಿ ತೀವ್ರ ಆತಂಕಗೊಂಡಿದ್ದಾರೆ. ವಿಪಕ್ಷಗಳು ಪ್ರತಿಭಟನೆ ಬಿಟ್ಟು ಜನರಲ್ಲಿ ಜಾಗೃತಿ ಮೂಡಿಸಲಿ. ಇ-ಬ್ಯಾಂಕಿಂಗ್ ಬಗ್ಗೆ ದೇಶದ ಜನರಲ್ಲಿ ಜಾಗೃತಿ ಮೂಡಿಸಲಿ ಎಂದು ಪ್ರಧಾನಿ ಪ್ರತಿಪಕ್ಷ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
 
ಭ್ರಷ್ಟಾಚಾರಿಗಳು ಜೈಲು ಸೇರುವ ದಿನಗಳು ಈಗ ಬಂದಿದೆ. ನ.8ರ ನಂತರ ಭ್ರಷ್ಟರು ಬಚಾವಾಗಲು ದಾರಿಯೇ ಇಲ್ಲ. ದೇಶವನ್ನು ಲೂಟಿ ಹೊಡೆದಿದ್ದವರು ಜೈಲಿಗೆ ಹೋಗುತ್ತಿದ್ದಾರೆ. ದೇಶದಲ್ಲಿ ಪ್ರಾಮಾಣಿಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ನಾಣು ಮೊದಲೇ ಹೇಳಿದಂತೆ ಈಗಿನ ಕ್ಷಟ ತಾತ್ಕಾಲಿಕವಷ್ಟೆ. ಮುಂದೆ ಎಲ್ಲರೂ ನೆಮ್ಮದಿಯಿಂದ ಇರುವ ಕಾಲ ಇರಲಿದೆ.

LEAVE A REPLY

Please enter your comment!
Please enter your name here