'ಪ್ರಗತಿ ಭವನ' ಲೋಕಾರ್ಪಣೆ

0
567

ರಾಷ್ಟ್ರೀಯ ಪ್ರತಿನಿಧಿ ವರದಿ
ತೆಲಂಗಾಣ ಸಿಎಂ ನೂತನ ಗೃಹ ಕಚೇರಿ ಲೋಕಾರ್ಪಣೆ ಮಾಡಲಾಗಿದೆ.ಹೈದ್ರಾಬಾದ್‍ನ ಬೇಗಮ್ ಪೇಟ್‍ನಲ್ಲಿ ನಿರ್ಮಿಸಿರುವ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಮನೆಯ ಗೃಹ ಪ್ರವೇಶ ನೆರವೇರಿದೆ.
 
 
 
ಬೆಳಗಿನ ಜಾವ 5 ಗಂಟೆ 22 ನಿಮಿಷಕ್ಕೆ ಬ್ರಾಹ್ಮೀ ಮೂಹೂರ್ತದಲ್ಲಿ ಸಿಎಂ ಚಂದ್ರ ಶೇಕರ್ ರಾವ್ ಹಾಗೂ ಪತ್ನಿ ಶೋಭಾ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು.
 
 
 
9 ಎಕರೆಯಲ್ಲಿ ನಿರ್ಮಾಣವಾಗಿರುವ 50 ಕೋಟಿಯ ಭವ್ಯ ಬಂಗಲೆಗೆ ‘ಪ್ರಗತಿ ಭವನ್’ ಎಂದು ಹೆಸರಿಡಲಾಗಿದೆ. ಬಂಗಲೆಯ ಎಲ್ಲಾ ಕಿಟಕಿಗಳು ಬುಲೆಟ್ ಪ್ರೂಫ್ ಆಗಿದೆ. ಮನೆಯಲ್ಲಿ 250 ಜನ ಕೂರಬಹುದಾದಂತಹ ಥಿಯೇಟರ್, ದೊಡ್ಡ ಕಾನ್ಫರೆನ್ಸ್ ಹಾಲ್, ಹಾಗೂ ಹಿರಿಯ ಅಧಿಕಾರಿಗಳಿಗಾಗಿ ಕೊಠಡಿಗಳಿವೆ.

LEAVE A REPLY

Please enter your comment!
Please enter your name here