ಪೋಸ್ಟ್ ಡಿಪ್ಲೋಮಗೆ ಅರ್ಜಿ ಆಹ್ವಾನ

0
176

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರು, ಮೈಸೂರು ಮತ್ತು ಧಾರವಾಡ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ಉದ್ಯೋಗವಕಾಶಗಳಿಗಾಗಿ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
 
 
ಪ್ರೆಸ್ ಟೂಲ್ಸ್, ಪ್ಲಾಸ್ಟಿಕ್ ಮೌಲ್ಡ್ಸ್, ಪ್ರೆಷರ್ ಡೈ ಕ್ಯಾಸ್ಟಿಂಗ್ಸ್ ಡೈಸ್, ಜಿಗ್ಸ್ ಮತ್ತು ಫಿಕ್ಷ್ಸರ್ ಮುಂತಾದ ವಿಷಯಗಳನ್ನೊಳಗೊಂಡ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಮೆಕ್ಯಾನಿಕಲ್, ಇಂಡಸ್ಟ್ರೀಯಲ್ ಪ್ರೊಡಕ್ಷನ್, ಆಟೋ ಮೊಬೈಲ್, ಪ್ಲಾಸ್ಟಿಕ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮತ್ತು ಬಿ.ಇ., ಹಾಗೂ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್, ಮೆಕೆಟ್ರಾನಿಕ್ಸ್ ವಿಷಯಗಳಳ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಮೇಲ್ಕಂಡ ಮೂರು ಕೇಂದ್ರಗಳಲ್ಲಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 15 ರೊಳಗೆ ಖುದ್ದು ಅರ್ಜಿಯನ್ನು ಪಡೆದು ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here