ಮೂಡುಬಿದಿರೆ: ಭುವನಜ್ಯೋತಿ ವಸತಿ ಶಿಕ್ಷಣ ಸಂಸ್ಥೆ ಶಿರ್ತಾಡಿ ಹಾಗೂ ಪೊಲೀಸ್ ಇಲಾಖೆ ಮೂಡುಬಿದಿರೆ ದ.ಕ. ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಹಾಗೂ ಸಲ್ಲಿಸುವ ಅಭ್ಯರ್ಥಿಗಳಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಮಾರ್ಚ್ 28 ಭಾನುವಾರ ಹಮ್ಮಿಕೊಂಡಿದೆ.
ಶಿರ್ತಾಡಿ ಭುವನ ಜ್ಯೋತಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧೨.೩೦ರ ತನಕ ಕಾರ್ಯಾಗಾರ ನಡೆಯಲಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಯುಜಿಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿ.ವಿ.ಯಲ್ಲಿ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಅಂಚೆ ಮತ್ತು ದೂರ ಶಿಕ್ಷಣ ನಿಯಮಾನುಸಾರ ಪಡೆದಿರುವ ಪದವಿ ಹೊಂದಿರುವವರಾಗಿರಬೇಕು. ವಯೋಮಿತಿ 21ರಿಂದ 30ರೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಮಹಿಳೆ ಮತ್ತು ಪುರಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಪಿಯುಸಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು. ವಯೋಮಿತಿ 20ರಿಂದ 27ವರ್ಷವಾಗಿರಬೇಕು.
ಆಸಕ್ತರು ಪಾಲ್ಗೊಳ್ಳಬಹುದಾಗಿದ್ದು ಕಾರ್ಯಾಗಾರ ಸಂಪೂರ್ಣ ಉಚಿತವಾಗಿರುತ್ತದೆ.