ಪೊಲೀಸರಿಗೆ ಶುಭ ಸುದ್ದಿ

0
580

ಬೆಂಗಳೂರು ಪ್ರತಿನಿಧಿ ವರದಿ
ಈ ವರ್ಷ ಮುಗಿಯುತ್ತಿದ್ದಂತೆಯೇ ಪೊಲೀಸರಿಗೆ ಶುಭ ಸುದ್ದಿಯೊಂದಿದೆ. ಇನ್ಮುಂದೆ ಪೊಲೀಸರು ಹೆಚ್ಚುವರಿ ಸಂಬಳ ಪಡೆಯಲಿದ್ದಾರೆ.
 
 
 
ಪಿಎಸ್ ಐ, ಪೇದೆಗಳಿಗೆ 2 ಸಾವಿರ ರೂ. ಹೆಚ್ಚುವರಿ ಸಿಗಲಿದೆ. ಪ್ರತಿತಿಂಗಳೂ ಕೂಡ 2 ಸಾವಿರ ರೂ. ಹೆಚ್ಚುವರಿ ಸಂಬಳವಾಗುತ್ತದೆ. 80 ಸಾವಿರ ಪೊಲೀಸರಿಗೆ ಇದರಿಂದ ಅನುಕೂಲವಾಗಲಿದೆ. ಇದರಿಂದ ಸರ್ಕಾರಕ್ಕೆ 200ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಇನ್ಮುಂದೆ 10 ವರ್ಷ ಸೇವೆ ಸಲ್ಲಿಸಿದ ಪೇದೆಗಳಿಗೂ ಬಡ್ತಿ ದೊರೆಯಲಿದೆ. ಪ್ರಮೋಷನ್ ಅವಧಿ 20 ವರ್ಷದಿಂದ 10 ವರ್ಷಕ್ಕೆ ಇಳಿಕೆಯಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಆಡರ್ಲಿ ಸೌಲಭ್ಯ ರದ್ದಾಗಿದೆ. ಇದರಿಂದ ಅಧಿಕಾರಿಗಳ ಮನೆಯಲ್ಲಿ ಸಿಬ್ಬಂದಿಗಳು ಕೆಲಸ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
 
 
ಪೊಲೀಸರ ವೇತನ ತಾರತಮ್ಯ ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಔರಾದ್ಕರ್ ಸಮಿತಿ ರಚನೆ ಮಾಡಿದ್ದೆವು. ವೇತನ ಪರಿಷ್ಕರಣೆ ಬಗ್ಗೆ ಚರ್ಚೆ ಮಾಡುವುದು ಕಷ್ಟವಾಗಿದೆ. ಬೇರೆ ಸರ್ಕಾರಿ ನೌಕರರು, ಬೇರೆ ರಾಜ್ಯದ ಪೊಲೀಸರ ವೇತನ ಸೇರಿ ಎಲ್ಲದರ ಕುರಿತು ನಾವು ಗಮನಹರಿಸಿದ್ದೇವೆ ಎಂದು ಸಿಎಂ ವಿವರಿಸಿದ್ದಾರೆ.
 
 
ಪ್ರಸಕ್ತ ವರ್ಷ ಒಟ್ಟು 7915 ಪೊಲೀಸ್ ಪೇದೆಗಳ ನೇಮಕಾತಿಯಾಗಿದೆ. 711 ಪಿಎಸ್ ಐಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. 6610 ಪೇದೆ, 215 ಪಿಎಸ್ ಐ ನೇಮಕ ಪ್ರಕ್ರಿಯೆ ನಡೀತಿದೆ ಎಂದು ಸಿಎಂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here